ಓ ನಲ್ಲೆ...ಸವಿನುಡಿಯ ಹೇಳೆ
ಮಾತಲ್ಲೇ...ಹೊಸ ಹರುಷ ನೀ..ಡೆ
ಬದುಕಲ್ಲಿ ಇಂದು..ಸಡಗರವ
ನೀ...ತಂದೆ ನನಗೆ
ಓ ನಲ್ಲೆ...ಸವಿನುಡಿಯ ಹೇಳೆ
ಮಾತಲ್ಲಿ...ಹೊಸ ಹರುಷ ನೀ..ಡಿ
ಬದುಕಲ್ಲಿ ಇಂದು...ಸಡಗರವ
ನೀ ತಂದೆ ನನಗೆ
ಓ ನಲ್ಲೆ...ಸವಿನುಡಿಯ ಹೇ...ಳೆ
ನಿನ್ನಾ ನಯನದಲ್ಲಿ ಏನೋ ಕಾಂತಿ
ನನ್ನ ಸೆಳೆವಂತೆ
ನಿನ್ನಾ ಅಧರದಲ್ಲಿ ಏನೋ ಹೊಳಪು
ನನ್ನ ಕರೆವಂತೆ...
ನಿನ್ನಾ ಬಯಕೆ ಏನು ಆಸೆ
ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು
ಹೇಳು ಬಾ...ಇಲ್ಲಿ
ಮರೆಯೊಳಗೆ ಅಡಗಿರುವ
ಹಸುಮಗುವು ನಗುವ ನಿಮ್ಮ ನುಡಿಗೆ
ಹ.ಹ.ಹ....
ಓ ನಲ್ಲಾ ಸವಿನುಡಿಯ ಹೇ..ಳಿ
ಮಾತಲ್ಲೇ...ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ
ನೀ ತಂದೆ ನನಗೆ
ಓ ನಲ್ಲೆ...ಸವಿನುಡಿಯ ಹೇ..ಳೆ
ಹಂ..ಹಂ.ಹಂ...
ಕಂದಾ ಮನೆಗೆ ಬಂದ ಸುಖವ ತಂದ ನಮ್ಮ ಬಾಳಲ್ಲಿ
ತನ್ನ ನಗುವಿನಿಂದ ಬೆಳಕ ತಂದ ನಮ್ಮ ಮನದಲ್ಲಿ...
ಲಾಲಿ ಹಾಡು ಕಂದ ಇಂದಿನಿಂದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸಂತೋಷ
ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ...ಸವಿನುಡಿಯ ಹೇ...ಳೆ
ಮಾತಲ್ಲೇ...ಹೊಸ ಹರುಷ ನೀ...ಡಿ
ಬದುಕಲ್ಲಿ ಇಂದು..ಸಡಗರವ
ನೀ ತಂದೆ ನನಗೆ
ಓ ನಲ್ಲೆ
ಓ ನಲ್ಲಾ
ಓ ನಲ್ಲೆ
ಓ ನಲ್ಲಾ
ಹ್ ಓ ನಲ್ಲೆ
ಹ್ ಓ ನಲ್ಲಾ
ಹ.ಹ.ಹ.ಹ...