huatong
huatong
avatar

Bangaradinda Bannana Thanda

K. J. Yesudas/Anuradha Sriramhuatong
only1keyhuatong
الكلمات
التسجيلات
ಕೋರಸ್

ಬಂಗಾರದಿಂದ ಬಣ್ಣಾನ ತಂದ

ಸಾರಂಗದಿಂದ ನಯನಾನ ತಂದ

ಮಂದಾರವನ್ನು ಹೆಣ್ಣಾ.ಗು ಎಂದ

ದಾಳಿಂಬೆಯಿಂದ ದಂತಾನ ತಂದ

ಮಕರಂದ ತುಂಬಿ ಅಧರಾನ ತಂದ

ನನ್ನನು ತಂದ ರುಚಿ ನೋಡು ಎಂದ

ಕೋರಸ್

ಅಪರೂಪದಂದ ನನಗಾಗಿ ತಂದ

ಚಂದಮಾಮನಿಂದ ಹೊಳಪನು ತಂದ

ಬಾಳೆ ದಿಂಡಿನಿಂದ ನುಣುಪನು ತಂದ

ಅಂದ

ಅಂದ

ಆಂದ ಚಂದ ಹೊರುವ ಕಂಬದ ಜೋಡಿಗೆ

ಮಿಂಚಿರಿ ಎಂದ

ಹಂಸದಿಂದ ಕೊಂಚ ನಡಿಗೆಯ ತಂದ

ನವಿಲಿಂದ ಕೊಂಚ ನಾಟ್ಯವ ತಂದ

ನಯವೊ ಲಯವೊ

ನಯವೊ ಲಯವೊ ರೂಪಾಲಯವೊ

ರಸಿಕನೆ ಹೇಳು ನೀ ಎಂದ

ತಂಗಾಳಿಯಿಂದ ಸ್ನೇಹಾನ ತಂದ

ಲತೆ ಬಳ್ಳಿ ಇಂದ ಸಿಗ್ಗನು ತಂದ

ಸಿಗ್ಗನು ಇವಳ ನಡುವಾಗು ಎಂದ

ನಡುವನ್ನು ಅಳಿಸಿ ಎದೆ ಭಾರ ತಂದ

ನನ್ನನ್ನು ಲತೆಗೆ ಮರವಾಗು ಎಂದ

ಕೋರಸ್

ಅಪರೂಪದಂದ ನನಗಾಗಿ ತಂದ ೧

ಕೋರಸ್

ಗಂಧ ತಂದನೊ ಗಮರುಗದಿಂದ

ರತಿಯ ತಂದನೊ ಅವನುರದಿಂದ

ಭ್ರಮರ ಅಮರ ಭ್ರಮರ ಅಮರ

ಕಂಪನ ಕಡಲ ದೋಣಿಗೆ ಕಾಮನ ತಂದ

ಭೂಮಿ ಸುತ್ತ ಇರೊ ಕಾಂತವ ತಂದ

ಬಾನಿನಿಂದ ಏಕಾಂತವ ತಂದ

ಒಲವು ಚೆಲುವು

ಒಲವು ಚೆಲುವು ಕೂಡೋ ಕಲೆಗೆ

ಘರ್ಷಣೆ ಆಕರ್ಷಣೆ ತಂದ

ಕರಿ ಮೋಡದಿಂದ ಮುಂಗುರುಳ ತಂದ

ಕೋಲ್ಮಿಂಚಿನಿಂದ ರತಿ ನೋಟ ತಂದ

ಜಲಧಾರೆಯಿಂದ ಒಲವನ್ನು ತಂದ

ಒಲವನ್ನು ಓಡೊ ನದಿಯಾಗು ಎಂದ

ನನ್ನನು ನದಿಗೆ ಕಡಲಾಗು ಎಂದ

ಬಂಗಾರದಿಂದ ಬಣ್ಣಾನ ತಂದ

ಸಾರಂಗದಿಂದ ನಯನಾನ ತಂದ

ಮಂದಾರವನ್ನು ಹೆಣ್ಣಾಗು ಎಂದ

ಕೋರಸ್

ಅಪರೂಪದಂದ ನನಗಾಗಿ ತಂದ

المزيد من K. J. Yesudas/Anuradha Sriram

عرض الجميعlogo