logo

Ninna Danigaagi

logo
الكلمات
ಸಿದ್ಧಾರ್ಥ

....

....

ನಿನ್ನ ಧನಿಗಾಗಿ ನಿನ್ನ ಕರೆಗಾಗಿ

ನಿನ್ನ ಸಲುವಾಗಿ ಕಾಯುವೆ

ತೀರ ಬಳಿಬಂದು ನೀನು ನನಗೊಂದು ಸೋಜಿಗದಂತೆ

ಕಾಣುವೆ

ಒಂಟಿ ಇರುವಾಗ ಕುಂಟು ನೆಪೆ

ತೂರಿ ಬಂದ ಕನಸೆಲ್ಲ ನಿನ್ನದು

ನಾನು ಅನುರಾಗಿ ನೀನೆ ನನಗಾಗಿ

ಎನ್ನುವ ಭಾವನೆ ನನ್ನದು

ಕಣ್ಣಿನಲ್ಲೇನೆ ಹೊಮ್ಮಿದೆ ಕೋಮಲ ಕೋರಿಕೆ ..

ಒಟ್ಟಿನ ಅಂಕಿತ ಬೇಕಲ್ಲ ಒಪ್ಪಂದಕೆ...

ನಿನ್ನ ಧನಿಗಾಗಿ ನಿನ್ನ ಕರೆಗಾಗಿ

ನಿನ್ನ ಸಲುವಾಗಿ ಕಾಯುವೆ

ತೀರ ಬಳಿಬಂದು ನೀನು ನನಗೊಂದು

ಸೋಜಿಗದಂತೆ ಕಾಣುವೆ

ಹೆದರುತಾ ಅರಳಿವೆ ನಾನಾ

ಹಂಬಲ ...ನಿನ್ನನೆ ತಲುಪಲು

...

ಮನಸಲ್ಲಿ ಸವಿಗನಸಿನ ಸಾಲೆ

ನಿಂತಿದೆ .... ಅಂಗಡಿ ತೆರೆಯಲು

ಎಲ್ಲೆ ನಾ ಹೋದರೂ ಗಮನ ಇಲ್ಲೆ ಇದೆ....

ಸನಿಹವೆ ನೀ ಬೇಕೆನ್ನುವ ಹಟವು ಹೆಚ್ಚಾಗಿದೆ...

ಈಗ ಚಂದ್ರನ ಒಪ್ಪಿಗೆ ..ಬೇಕೇನು ಸಲ್ಲಾಪಕೆ....

ನೆನಪಿನ ಬೀದಿಯ ಎಲ್ಲ ಗೋಡೆಗು

...ನಿನ್ನದೆ ಮೊಗವಿದೆ

...

ಸಲಿಗೆಯ ತಕರಾರಿನ ಸಣ್ಣ ಕೋಪಕು

..ಬೇರೆಯೇ ಸುಖವಿದೆ...

ಇನ್ನು ಇಂಪಾಗಿದೆ ಕರಿವಾ ನಿನ್ನ ಸ್ವರ..

ಹ್ರುದಯದಲಿ ಎಂದೆಂದಿಗು ಇರಲಿ ಹಸ್ತಾಕ್ಷರ....

ಬೇಗ ಮೂಡಲಿ ಮತ್ಸರ .. ಈ ಭೂಮಿ ಆಕಾಶಕೆ.....

ನಿನ್ನ ಧನಿಗಾಗಿ ನಿನ್ನ ಕರೆಗಾಗಿ

ನಿನ್ನ ಸಲುವಾಗಿ ಕಾಯುವೆ

ತೀರ ಬಳಿಬಂದು ನೀನು ನನಗೊಂದು

ಸೋಜಿಗದಂತೆ ಕಾಣುವೆ