logo

Naanu Badavi Aata badava

logo
الكلمات
ರಚನೆ ದ.ರಾಬೇಂದ್ರೆ(ನಾಕುತಂತಿ ಕವನ ಸಂಕಲನ)

ಸಂಗೀತ ಮೈಸೂರು ಅನಂತ ಸ್ವಾಮಿ

ಗಾಯನ ಕಸ್ತೂರಿ ಶಂಕರ್

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕು

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಹತ್ತಿರಿರಲಿ ದೂರವಿರಲಿ

ಅವನೆ ರಂಗಸಾ....ಲೆ

ಹತ್ತಿರಿರಲಿ ದೂರವಿರಲಿ

ಅವನೆ ರಂಗಸಾ...ಲೆ

ಕಣ್ಣು ಕಟ್ಟುವಂಥ ಮೂರ್ತಿ

ಕಿವಿಗೆ ಮೆಚ್ಚಿನೋಲೆ

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಆತ ಕೊಟ್ಟ ವಸ್ತು ಒಡವೆ

ನನಗೆ ಅವಗೆ ಗೊತ್ತು

ಆತ ಕೊಟ್ಟ ವಸ್ತು ಒಡವೆ

ನನಗೆ ಅವಗೆ ಗೊತ್ತು

ತೋಳುಗಳಿಗೆ ತೋಳಬಂದಿ

ಕೆನ್ನೆ ತುಂಬಾ ಮುತ್ತು

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ϟϟϟϟϟϟϟ

ಕುಂದು ಕೊರತೆ ತೋರಲಿಲ್ಲ

ಬೇಕು ಹೆಚ್ಚಿಗೇನು

ಕುಂದು ಕೊರತೆ ತೋರಲಿಲ್ಲ

ಬೇಕು ಹೆಚ್ಚಿಗೇನು

ಹೊಟ್ಟೆಗಿತ್ತ ಜೀವ ಫಲವ

ತುಟಿಗೆ ಹಾಲು ಜೇನು.

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕು

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು.....

Naanu Badavi Aata badava لـ Kasturi Shankar - الكلمات والمقاطع