logo

Thayi Thayi

logo
الكلمات
ದೆ.....

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ

ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ

ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ

ತ್ಯಾಗಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ

ಲಾಲಿ ಹಾಡೋ ಹೆತ್ತ ತಾಯಿಗೆ

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ

ಅಲೆವಳು ದಣಿವಳು ಅನುಕ್ಷಣಾ ಮಿಡಿವಳು

ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ

ಜಗವನೆ ಮಗುವಿನ ತೆರದಲಿ ತಿಳಿವಳು

ಅಳುವಳು ಅಬಲೆಯು ಎಂದೂ

ದುಡಿವಳು ಮಗುವಿಗೆ ಎಂದೂ ಪ್ರೇಮಮಯಿ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ

ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ

ಮೊಲೆಯುಣಿಸುವ ಸ್ತ್ರೀ ಧರ್ಮ

ವಹಿಸಿದಾ ತಾಯಿಗೆ ಬ್ರಹ್ಮ

ಈ ಬದುಕಿಗಾಗಿ ಈ ಮೌನದ ಆಕ್ರಂದನ

ಆಆಆ....

ಅನುಮಾನವಿಲ್ಲ ಇದು ಮಾಯದ ಮಹ ಕಲಿಯುಗ

ಹೊರುವಳು ಭೂಮಿ ಭಾರ ಹೆರುವಳು ತಾಯಿ ನೋವ

ತ್ಯಾಗಮಯಿ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ

ಲಾಲಿ ಹಾಡೋ ಹೆತ್ತ ತಾಯಿಗೆ