ತಂಬೂರಯ್ಯ ತಂತಿ ಮೀಟಯ್ಯ...
ತಳವಾರಯ್ಯ ಕೊಂಬು ಉದಯ್ಯಾ
ತಂಬೂರಯ್ಯ ತಂತಿ ಮೀಟಯ್ಯ..
ತಳವಾರಯ್ಯ ಕೊಂಬು ಉದಯ್ಯಾ
ಪೂರ್ವ ಜನುಮದ ನನ್ನ ಸ್ನೇಹಿತ
ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂರಿನಿಂದ ಬಂದ ಮದುವೆ ಆಗಲು
ತಂಬೂರಯ್ಯ ತಂತಿ ಮೀಟಯ್ಯ...
ತಳವಾರಯ್ಯ ಕೊಂಬು ಉದಯ್ಯಾ
ಸರ ಸರ ಹಾಕೋ ಸೇರೆಗಾರ ಚಪ್ರವ
ಬಿರ ಬಿರ ಬಿಗಿಯಿರೋ ಬಾಳೆ ದಿಂಡನ
ಗಬ ಗಬ ಹಾಸೊ ಬಡಗಿಯನ್ನ ಹಸೆಮಣೆ
ದಡ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಷಿಣ ಹಾಕಿರಿ
ಬೆರಳಿಗೆ ಬೆಳ್ಳಿಯ ಉಂಗರ ಹಾಕಿರಿ
ನಾಳೆ ಮದುವೆ ಛತ್ರವೋ
ಸ್ವರ್ಗ ನನಗೆ ಹತ್ರವೋ
ಪೂಜಾರಯ್ಯ ಮಂತ್ರ ಒದಯ್ಯ ..
ಆಚರಯ್ಯಾ ತಾಳಿ ತಾರಯ್ಯಾ....
ಪೂರ್ವ ಜನುಮದ ನನ್ನ ಸ್ನೇಹಿತೆ
ಕಾಡು ಮಲ್ಲಿಗೆ ಮುಡಿಯೊ ದೇವತೆ
ದೂರದೂರಿನಿಂದ ಬಂದೆ ಮದುವೆ ಆಗಲು
ತಂಬೂರಯ್ಯ ತಂತಿ ಮೀಟಯ್ಯ...
ತಳವಾರಯ್ಯ ಕೊಂಬು ಉದಯ್ಯಾ
ಚೆಡ್ಡಿನಂಜ ಹಿಡಿ ಪಂಜ
ನನ್ನ ಜತೆಗಾತಿ ಎದೆಗಾತಿ ಮುಖ ನೋಡುವ
ತಂಟೆ ಕಾಳ ಬಡಿ ತಾಳ
ಇಂಥ ಹುಂಮೇಳಿ ಕಣಿವೇಲಿ ಕುಣಿದಾಡುವ
ಗೊರವ್ವ ಬಳಿಯವ್ವ ಗಂಧವ ಕೆನ್ನೆಗೆ ಬೇಗ
ಲಚುಮವ್ವ ತೀಡವ್ವ ಕಾಡಿಗೆ ಕಣ್ಣಿಗೆ ಈಗ
ಬಾ..ರೆ ನೀ..ರೇ ವಸಗೆಯ ಮನೆ ಕಾದಿದೆ
ಮೊದಲು ತೊದಲು ಒಪ್ಪದು
ಅದಲು ಬದಲು ತಪ್ಪದು
ಬಳೆಗಾರಯ್ಯ ಬಳೆಯ ಹಾಕಯ್ಯಾ ..
ಮಡಿವಾಳಯ್ಯಾ ಮಡಿಯ ಹಾಸಯ್ಯಾ
ಸೋಬಾನಮ್ಮಾ ಗಾನ ಮಾಡಮ್ಮಾ
ಮಂಗಳಾರ್ಥಮ್ಮಾ ದೀಪ ಬೆಳಗಮ್ಮಾ
ಮನಸ ಕದ್ದೆಯ ಓ ಮಾಮಯ್ಯಾ
ಒಳಗೆ ಬಂದು ನೀ ಹೂ ಮೂಡಿಸಯ್ಯಾ
ಮಲ್ಲೆ ದಿಂಡು ಮೂಡಿಸೋ ಗಂಡು ನನ್ನ ಕರೆದೆಯಾ
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ