ಯಾರೇ ಬಂದರೂ
ಎದುರ್ಯಾರೇ ನಿಂತರೂ
ಪ್ರೀತಿ ಹಂಚುವ
ಯಜಮಾನ
ಜೀವ ಹೋದರೂ
ಜಗವೇನೆ ಅಂದರೂ
ಮಾತು ತಪ್ಪದ
ಯಜಮಾನ
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ
ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ
ನಿಂತ ನೋಡೋ
ಯಜಮಾನ
ನಿಂತ ನೋಡೋ
ಯಜಮಾನ
ಯಾರೇ ಬಂದರೂ
ಎದುರ್ಯಾರೇ ನಿಂತರೂ
ಪ್ರೀತಿ ಹಂಚುವ
ಯಜಮಾನ
ಒಬ್ಬನೇ ಒಬ್ಬ ನಮಗೆಲ್ಲಾ ಒಬ್ಬನು
ಯಾರ್ ಹೆತ್ತ ಮಾಗನೋ ನಮಗಾಗಿ ಬಂದನು
ಮೇಲು ಕೀಳು ಗೊತ್ತೇ ಇಲ್ಲ
ಬಡವಾನೂ ಗೆಳೆಯಾನೇ
ಶ್ರೀಮಂತಿಕೆ ತಲೆ ಹತ್ತೇ ಇಲ್ಲ
ಹತ್ತೂರ ಒಡೆಯಾನೇ
ನಿನ್ನ ಹೆಸರೂ
ನಿಂದೇ ಬೆವರೂ
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ
ನೇರ ನಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ
ನಿಂತ ನೋಡೋ ಯಜಮಾನ
ನಿಂತ ನೋಡೋ ಯಜಮಾನ
ಯಾರೇ ಬಂದರೂ
ಎದುರ್ಯಾರೇ ನಿಂತರೂ
ಪ್ರೀತಿ ಹಂಚುವ
ಯಜಮಾನ
ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ
ಯಾವುದೇ ಕೇಡು ತಾಕದು ನಿನಗೆ
ಕಾಯುವುದೂ ಅಭಿಮಾನ
ಸೋಲಿಗು ಸೋಲದ ಗೆದ್ದರು ಬೀಗದ
ಒಬ್ಬನೇ ಯಜಮಾನ
ಪ್ರೀತಿಗೇ ಅತಿಥಿ
ಸ್ನೇಹಕೇ ಸಾರಥಿ
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು
ನಿಂತ ನೋಡೋ
ಯಜಮಾನ
ನಿಂತ ನೋಡೋ
ಯಜಮಾನ