ಗಾನ ಸಂಗಮ ಕುಟುಂಬದ ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ..
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ..
ಹೇ..ಳು ಪರಿಮಳ ಚೆಲ್ಲುವುದೇ..
ಕಲ್ಲಿನ ವೀಣೆಯ ಮೀ~ಟಿದರೇನು
ನಾದವು.. ಹೊಮ್ಮುವುದೇ..
ಎಲೆ ಎಲೆಯಲ್ಲಾ ಹೂವುಗಳಾಗಿ
ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ.. ಸೋಕಲಿ
ಆ ಮನ್ಮಥನೇ ನನ್ನೆದುರಾಗಿ
ಮೋಹನ ರಾಗದಿ..ನನ್ನನು ಕೂಗಿ
ಛಲದಲೀ ಹೋರಾಡಲಿ
ಎಂದಿಗೂ ಅವನು ಗೆಲ್ಲುವುದಿಲ್ಲ
ಸೋಲದೇ ಗತಿಯಿಲ್ಲ..
ಕಲ್ಲಿನ ವೀಣೆಯ, ಮೀಟಿದರೇನು
ನಾದವು ಹೊಮ್ಮುವುದೇ...
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ
ಹೇಳು.. ಪರಿಮಳ ಚೆಲ್ಲುವುದೇ..
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ...
ಕಾಣುವ ಅಂದಕೇ..ನಾ ಕುರುಡಾಗಿ
ಪ್ರೇಮದ ಹಾಡಿಗೇ..ನಾ ಕಿವುಡಾಗಿ
ನೆಮ್ಮದೀ ದೂರಾಗಿದೆ..
ರೋಷದ ಬೆಂಕಿ..ಒಡಲನು ನುಂಗಿ
ಶಾಂತಿಯು ನನ್ನಾ..ಎದೆಯಲಿ ಇಂಗಿ
ಆಸೆಯೂ ಮಣ್ಣಾಗಿದೆ
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೆ...
ಕಲ್ಲಿನ ವೀಣೆಯ ಮೀಟಿದರೇನು
ನಾದವು.. ಹೊಮ್ಮುವುದೇ..
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ
ಹೇಳು.. ಪರಿಮಳ ಚೆಲ್ಲುವುದೇ..