menu-iconlogo
huatong
huatong
avatar

♥️ ಆಕಾಶದಾಗೆ ಯಾರೋ ಮಾಯಗಾರನು ♥️

💕ಸ್ವೀಟಿ ಅನು 💕huatong
💞SWEETY💞ANU💞huatong
লিরিক্স
রেকর্ডিং
ಗಾನ ಸಂಗಮ ಕುಟುಂಬದ ಕೊಡುಗೆ

**ಅಪ್ಲೋಡರ್ ಸ್ವೀಟಿ ಅನು **

=====G S=====

F) ಆಕಾಶದಾಗೆ ಯಾರೋ ಮಾಯಗಾರನು.

ಚಿತ್ತಾರ ಮಾಡಿಹೋಗೋನೇ....ಏಏಏ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು.

ಮಲೆನಾಡ ಮಾಡಿ ಹೋಗೋನೇ....ಏಏಏ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು.

ಸಂಚಾರ ಮಾಡುವ ಬಾರಾ....ಆಆಆ

ಆಕಾಶದಾಗೆ ಯಾರೋ ಮಾಯಗಾರನು.

ಚಿತ್ತಾರ ಮಾಡಿಹೋಗೋನೇ....ಏಏಏ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು.

ಮಲೆನಾಡ ಮಾಡಿ ಹೋಗೋನೇ....ಏಏಏ

=====ಸ್ವೀಟಿ ಅನು =====

(F) ಸುದ್ದಿ ಇಲ್ಲದೆ ಮೋಡ ಶುಧ್ಧಿ ಆಗೋದು.

ಸದ್ದೇ ಇಲ್ಲದೆ ಗಂಧ ಗಾಳಿಯಾಗೋದು.

ತಂಟೇನೆ ಮಾಡದೆ,ಹೊತ್ತುಟ್ಟಿ ಹೋಗೋದು.

ಏನೇನು ಮಾಡದೆ, ನಾವ್ಯಾಕೆ ಬಾಳೋದು.

(M) ಹಾರೋ ಹಕ್ಕಿನ ತಂದು ಕೂಡಿ ಹಾಕೋದು.

ಕಟ್ಟೊ ಜೇನನ್ನ ಸುಟ್ಟು ತಿಂದು ಹಾಕೋದು..

ನರಮನ್ಸ ಕಲಿಯಲ್ಲ,ಒಳ್ಳೇದು ಉಳಿಸಲ್ಲ..

ಅವನಡಿಯೋ ದಾರೀಲಿ, ಗರಿಕೇನು ಬೆಳೆಯಲ್ಲ..

(F) ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ...ಏಏಏ

(M) ನೀರೆಲೆಗಳ ತಕಧಿಮಿ ಎದೆಯೊಳಗೇ...ಏಏಏ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು..

ಸಂಚಾರ ಮಾಡುವ ಬಾರಾ...ಆಆಆ

ಆಕಾಶದಾಗೆ ಯಾರೋ ಮಾಯಗಾರನು..

ಚಿತ್ತಾರ ಮಾಡಿ ಹೋಗೋನೇ....ಏಏಏ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು.

ಮಲೆನಾಡ ಮಾಡಿ ಹೋಗೋನೇ....ಏಏಏ

****G S****

(M) ಕಾಡು ಸುತ್ತುವಾ ಆಸೆ ರಾಣಿಗೇಕಮ್ಮಾ..

ಕಾಲು ಇಟ್ಟರೆ ಸುತ್ತಾ ಕಲ್ಲು ಮುಳ್ಳಮ್ಮಾ..

ಏಳೋದು ಬೀಳೋದು ಬಡವರ ಪಾಡಮ್ಮಾ..

ನೀವ್ಯಾಕೆ ಹಾಡೀರಿ ಈ ಹಳ್ಳಿ ಹಾಡನ್ನ..

(F) ಇಲ್ಲಿ ಬೀಸುವಾ ಗಾಳಿ ಊರಲ್ಯಾಕಿಲ್ಲಾ..

ಇಲ್ಲಿ ಸಿಕ್ಕುವಾ ಪಾಠ ಶಾಲೆಲ್ಯಾಕ್ಕಿಲ್ಲಾ..

ಬಂಗಾರ ಸಿಂಗಾರ ಸಾಕಾಗಿ ಹೋಯಿತು..

ಅರಮನೆ ಅನಂದ ಬೇಸತ್ತು ಹೋಯಿತು..

(M)ಕೆಳಗಿಳಿಸುವಾ ಮನಸಿನ ಭಾರಗಳಾ...ಆಆಆ

(F) ಜಿಗಿ ಜಿಗಿಯವಾ ಚಿಂತೆಯಾ ಗುಡ್ಡಗಳಾ...ಆಆಆ

(Both) ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವ ಬಾರಾ...ಆಆಆ

(F) ಆಕಾಶದಾಗೆ ಯಾರೋ ಮಾಯಗಾರನು.

ಚಿತ್ತಾರ ಮಾಡಿಹೋಗೋನೇ...ಏಏಏ

(M) ಈ ಭೂಮಿ ಮ್ಯಾಗೆ ಯಾರೋ ತೋಟಗಾರನು.

ಮಲೆನಾಡ ಮಾಡಿ ಹೋಗೋನೇ...ಏಏಏ

(Both) ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವ ಬಾರಾ...ಆಆಆ....

****ಧನ್ಯವಾದಗಳು ****

💕ಸ್ವೀಟಿ ಅನು 💕 থেকে আরও

সব দেখুনlogo

আপনার পছন্দ হতে পারে

💕ಸ್ವೀಟಿ ಅನು 💕-এর ♥️ ಆಕಾಶದಾಗೆ ಯಾರೋ ಮಾಯಗಾರನು ♥️ - লিরিক্স এবং কভার