ಗಾನ ಸಂಗಮ ಕುಟುಂಬದ ಕೊಡುಗೆ
==ಅಪ್ಲೋಡರ್ ಸ್ವೀಟಿ ಅನು ==
ಗಂಡು : ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಹೆಣ್ಣು : ಇಂದೇತಕೊ ನಾನಿನ್ನಲಿ
ಬೆರೆವಂತ ಮನಸಾಗಿದೆ
ಗಂಡು : ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ...ಓಓಓ
ಹೆಣ್ಣು : ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
ಗಂಡು : ನೀ ಮೀಟಿದ
ಹೆಣ್ಣು : ಓಓಓಓಓ
ಗಂಡು : ನೆನಪೆಲ್ಲವು
ಹೆಣ್ಣು : ಓಓಓಓಓ
ಗಂಡು : ಎದೆ ತುಂಬಿ ಹಾಡಾಗಿದೆ
ಹೆಣ್ಣು : ಬಾಳಲ್ಲಿ ನೀ ಬರೆದೆ
ಹೊಸ ಪ್ರೇಮ ಕಾದಂಬರಿ.. ಓಓಓ
ಗಂಡು : ಧರೆಗಿಂದು ಬಂದಂತ
ಸೌಂದರ್ಯ ಸುರಸುಂದರಿ
ಹೆಣ್ಣು : ಶ್ರುತಿ ಸೇರಿದೆ ಬಾಳು ಹೀತವಾಗಿದೆ
ಗಂಡು : ಸುರಲೋಕದ ಸುಖ ನಮದಾಗಿದೆ
ಹೆಣ್ಣು : ತನು ಕೂಗಿದೆ ಮನ ಹಾಡಿದೆ
ಗಂಡು : ಎದೆ ಕೋಗಿಲೆ ಇದೋ ಹಾಡಿದೆ
ಹೆಣ್ಣು : ಮನಸು... ಮನಸು...
ಬೇರೆಯೇ ಬಾಳೇ ಸೊಗಸು
ಗಂಡು : ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
**ಸ್ವೀಟಿ ಅನು **
ಗಂಡು : ಆ ಬಾನು ಈ ಭೂಮಿ
ನೋಡಲ್ಲಿ ಒಂದಾಗಿದೆ.. ಆಹಾ...
ಹೆಣ್ಣು :ನಮ್ಮಂತೆ ನೀವೆಂದು
ಒಂದಾಗಿ ಇರಿ ಎಂದಿದೆ
ಗಂಡು : ಸಂಗಾತಿ ನಾ ನಿನ್ನ ಜೊತೆಯಾಗುವೆ
ಹೆಣ್ಣು : ಎಂದೆದಿಗೂ ನಿನ್ನ ಉಸಿರಾಗುವೆ
ಗಂಡು : ನೀನಿಲ್ಲದೇ ಇರಲಾರೆನು
ಹೆಣ್ಣು : ನಿನ್ನಿಂದ ನಾ ದೂರಾಗೇನು
ಗಂಡು : ನಗುವ... ನಲಿವ...
ಜಗವ ಮರೆತು ಮೆರೆವ
ಹೆಣ್ಣು : ನೀ ಮೀಟಿದ
ಗಂಡು :ಹO
ಹೆಣ್ಣು : ನೆನಪೆಲ್ಲವು
ಗಂಡು :ಹO O O
ಹೆಣ್ಣು : ಎದೆ ತುಂಬಿ ಹಾಡಾಗಿದೆ
ಗಂಡು :ಇಂದೇತಕೊ ನಾನಿನ್ನಲಿ
ಬೆರೆವಂತ ಮನಸಾಗಿದೆ
ಹೆಣ್ಣು : ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ...
ಗಂಡು : ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
**ಧನ್ಯವಾದಗಳು **