menu-iconlogo
huatong
huatong
লিরিক্স
রেকর্ডিং
ಆಸೆಯು ಕೈಗೂಡಿತು ಆಸರೆ ದೊರೆತಾಯಿತು

ಚಿಂತೆ ದೂರವಾಯಿತು ಮನಸು ಹಗುರವಾಯಿತು

ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ

ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ

ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು

ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ

ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ

ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ

ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ

ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು

ಆಸರೆ ದೊರೆತಾಯಿತು

ಚಿಂತೆ ದೂರವಾಯಿತು

ಮನಸು ಹಗುರವಾಯಿತು

ನೀನೆ ನನ್ನ ಸಂತೋಷ,

ನೀನೆ ನನ್ನ ಸೌಭಾಗ್ಯ

ನಿನ್ನಿಂದ ನಾನು ನಿನಗಾಗಿ

ನಾನು ನಿನ್ನಲ್ಲೆ ಸೇರಿ ಹೋದೆ

ಬಾಳೋ ಆಸೆ ನೀ ತಂದೆ,

ನನ್ನ ಸೇರಿ ಒಂದಾದೆ

suliyali ನಾನು ಹೋರಾಡುವಾಗ

ಜೊತೆಯಾಗಿ ನೀನು ಬಂದೆ

ಇನ್ನೇನು ಕಾಣೆ ಮುಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು

ಚಿಂತೆ ದೂರವಾಯಿತು ಮನಸು ಹಗುರವಾಯಿತು

ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ

ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ

ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ

ಆಸೆಯು ಕೈಗೂಡಿತು

ಆಸರೆ ದೊರೆತಾಯಿತು

ಚಿಂತೆ ದೂರವಾಯಿತು

ಮನಸು ಹಗುರವಾಯಿತು

ಮನಸು ಹಗುರವಾಯಿತು,

ಮನಸು ಹಗುರವಾಯಿತು,

ಮನಸು ಹಗುರವಾಯಿತು

Dr.RajKumar/S. Janaki থেকে আরও

সব দেখুনlogo