menu-iconlogo
huatong
huatong
avatar

Haalalladaru Haaku

Dr.RajKumarhuatong
লিরিক্স
রেকর্ডিং
ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ

ಹಾಲಲ್ಲಿ ಕೆನೆಯಾ..ಗಿ, ನೀರಲ್ಲಿ ಮೀನಾಗಿ

ಹಾಯಾಗಿರುವೆ ರಾಘವೇಂದ್ರ

ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ

ಹಾಲಲ್ಲಿ ಕೆನೆಯಾ..ಗಿ, ನೀರಲ್ಲಿ ಮೀನಾಗಿ

ಹಾಯಾಗಿರುವೆ ರಾಘವೇಂದ್ರ

ಮುಳ್ಳಲ್ಲಾದರು ನೂಕು,

ಕಲ್ಲಲ್ಲಾದರು ನೂಕು ರಾಘವೇಂದ್ರ....

ಆಆ ಆ ಹಾ ಆಆ ಹಾಆಆ ಆಆಆಆಆಆ....

ಮುಳ್ಳಲ್ಲಾದರು ನೂಕು,

ಕಲ್ಲಲ್ಲಾದರುನೂಕು ರಾಘವೇಂದ್ರ...

ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ

ಒಂದಾಗಿರುವೆ.. ರಾಘವೇಂದ್ರ

ಬಿಸಿಲಲ್ಲಿ ಒಣಗಿಸು,

ನೆರಳಲ್ಲಿ ಮಲಗಿಸು ರಾಘವೇಂದ್ರ...

ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ

ನಗುನಗುತ ಇರುವೆ.. ರಾಘವೇಂದ್ರ..

ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ...

ಸುಖವನ್ನೇ ನೀಡೆಂದು

ಎಂದೂ ಕೇಳೆನು ನಾನು ರಾಘವೇಂದ್ರ..

ಹಾ ಆ ಹಾ ಆಆ ಹಾಆಆ

ಆಆಆಆಆಆ....

ಸುಖವನ್ನೇ ನೀಡೆಂದು

ಎಂದೂ ಕೇಳೆನು ನಾನು ರಾಘವೇಂದ್ರ....

ಮುನ್ನ ಮಾಡಿದ ಪಾಪ

ಯಾರ ತಾತನ ಗಂಟು

ನೀನೇ ಹೇಳು ರಾಘವೇಂದ್ರ

ಎಲ್ಲಿದ್ದರೇನು ನಾ

ಹೇಗಿದ್ದರೇನು ನಾ ರಾಘವೇಂದ್ರ

ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ

ಬಾಳಿದರೆ ಸಾಕು... ರಾಘವೇಂದ್ರ

ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ

ಹಾಲಲ್ಲಿ ಕೆನೆಯಾ...ಗಿ, ನೀರಲ್ಲಿ ಮೀನಾಗಿ

ಹಾಯಾಗಿರುವೆ ರಾಘವೇಂದ್ರ...

ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ.....

ಹಾಲಲ್ಲಿ ಕೆನೆಯಾ...ಗಿ, ನೀರಲ್ಲಿ ಮೀನಾಗಿ

ಹಾಯಾಗಿರುವೆ ರಾಘವೇಂದ್ರ...

ಹಾಲಲ್ಲಾದರು ಹಾಕು

ನೀರಲ್ಲಾದರು ಹಾಕು ರಾಘವೇಂದ್ರ.....

Dr.RajKumar থেকে আরও

সব দেখুনlogo
Dr.RajKumar-এর Haalalladaru Haaku - লিরিক্স এবং কভার