ಆ ದೇವರು ಕಟ್ಟಿದ ಗುಡಿಯಲ್ಲಿ
ಗರ್ಭ ಗುಡಿಯಲ್ಲಿ
ಆಡ ಬಂದಾನೋ ನನ್ನಯ್ಯ ಆ ಆ ಆ
ಸುವ್ವಿ ಸುವ್ವ ಲಾಲಿ
ಆ ದೇವರೆ ಕಟ್ಟಿದ ಗುಡಿಯಲ್ಲಿ
ಗರ್ಭ ಗುಡಿಯಲ್ಲಿ
ಆಡ ಬಂದಾನೋ ನನ್ನಯ್ಯ ಆ ಆ ಆ
ಸುವ್ವಿ ಸುವ್ವ ಲಾಲಿ
ಅಮ್ಮ ಅನ್ನೋ ಅಧ್ಬುತ ನೋಡಲು....
ಅರಳಿ ಅರಳಿ ಅಲ್ಲಿ .
ಉರುಳಿ ಸುರುಳಿ ಎಲ್ಲಿ
ಕೈಯಲ್ಲಿ ಕಾಲಲ್ಲಿ ತಿವಿದಾನೋ ಒದ್ದಾನೋ
ಅಮ್ಮಾ...... ಆ. . ಆ ಆ ಆ
ಈ ಅಮ್ಮ ಅನ್ನೋ ಅಧ್ಬುತ ನೋಡಲು
ಬರುತೀನಿ ಅಂತಾನೇ ಕೇಳಿಸಿತೆ ಅಂತಾನೇ
ಬರುತೀನಿ ಅಂತಾನೇ ಕೇಳಿಸಿತೆ ಅಂತಾನೇ
ಕೇಳಿ ..ಎಲ್ಲಾ ... ಕೇಳಿ.....ಈ
ಆ ದೇವರೆ ಕಟ್ಟಿದ ತೇರಿನಲ್ಲಿ
ತಾಯಿ ತೇರಿನಲ್ಲಿ
ಕೂರ ಬಂದಾನೋ ನನ್ನಯ್ಯ ಆ ಆ ಆ
ಸುವ್ವಿ ಸುವ್ವ ಲಾಲಿ
ಏನೆನ್ನಲಿ ಈ ಆನಂದವಾ .....
ಜಗವೇ ಒಂದು ಅಣುವಾಗಿ
ಶಿವನ ಲೀಲಾ ಕಣವಾಗಿ
ಕನಸಾಗಿ ನನಸಾಗಿ ಮಗುವಾಗಿ ನಗುವಾಗಿ
ಅಮ್ಮಾ ... ಆ. ಆ ಆ ಆ
ಏ.ನೇನೆನ್ನಲಿ ಆ ಆನಂದವಾ ..
ನಾಳೆ ನಾ ತಾಯಾಗಿ ತುಳುಕಾಡುವೆ ಹಾಲಾಗಿ
ನಾಳೆ ನಾನು ತಾಯಾಗಿ ತುಳುಕಾಡುವೆ ಹಾಲಾಗಿ
ಕಂದ.. ನಿನ್ನಾ ... ದಯದಿಂ...ದ
ಆ ದೇವರು ಕಟ್ಟಿದ ಗುಡಿಯಲ್ಲಿ
ಗರ್ಭ ಗುಡಿಯಲ್ಲಿ
ಆಡ ಬಂದಾನೋ ನನ್ನಯ್ಯ ಆ ಆ ಆ
ಸುವ್ವಿ ಸುವ್ವ ಲಾಲಿ
ಆ ದೇವರೆ ಕಟ್ಟಿದ ಲೋಕದಲ್ಲಿ
ಜೀವಲೋಕ ದಲ್ಲಿ
ಆಡ ಬಂದಾನೋ ನನ್ನಯ್ಯ ಆ ಆ ಆ
ಸುವ್ವಿ ಸುವ್ವ ಲಾಲಿ
ಸುವ್ವಿ ಸುವ್ವ ಲಾಲಿ