F: ಬಾ...ಬಾರೋ ರಸಿಕ
ನೋಡೆನ್ನ ಈ ಥಳುಕಾ... ಕೈಚಳಕಾ..
ಮೈ ಪುಳಕಾ.ಆ.. ಆಹಾ ಚಳುಕಾ
M: ಮದ್ದಾನೆ ನಾನಾಗಿ ಮದವೇರಿ ಬಂದೆ
ಮದನಾರಿ ನಿನ್ನಲ್ಲಿ ಮದವನ್ನು ಕಂಡೆ
ಹುಚ್ಚೆದ್ದು ಘೀಳಿಟ್ಟು ಹೊತ್ತಾರೆ ತನಕ
ಜಲದಲ್ಲಿ ಜಗ್ಗಾಡಿ ಮಾಡೋಣ ಜಳಕ
F: ಹೇ.ಹೇ.ಹೇ.ಹೇ.ಬಾ...ಬಾರೋ ರಸಿಕ
ನೋಡೆನ್ನ ಈ ಥಳುಕಾ...
ಕೈಚಳಕಾ..ಮೈಪುಳಕಾ..ಆ.. ಆಹಾ ಚಳುಕಾ
F: ಆಹಾ ಒತ್ತಾಗಿದೆ ರಸ ಬಿಟ್ಟಾಗಿದೆ
ಮರಳುಗಾಡಿನ ಹೂ ಜೇನು..
ಕುಡಿದು ತಣಿಯಲು ಸುಖ ನೀನು
ಉಗ್ರಾಣದ ಕದ ಬಿಚ್ಚಾಗಿದೆ
ಬಿಡದೆ ದೋಚಲು ಬಾ ನೀನು..
ತುಂಬಿ ಕಳಿಸುವೆ ಹೊರೆ ನಾನು.....
M: ಸ್ವಪ್ನಸುಂದರಿ ರತ್ನಮಂಜರಿ
ಕೂಡಿ ಆಡೋಣ ಹೀಗೆ
ಚಂದ್ರಚಂದನ ಬಾಹುಬಂಧನ
ನೀಡು ಚುಂಬನ ಮೈಮಂಚ ಕಾದೋಗಿದೆ
F: ಆಹ್ ಹಾ..ಆಹಾ..ಹಾಹಾ..
ಹೇಹೇ..ಹೇಹೇ.ಹೇಹೇಹೇಹೇ..
ಹೇಹೇ..ಎಹೇ.ಹೇಹೇ..ಎಹೇ..ಹೇಹೇ..ಎಹೇಹೇ...
F: ಬಾ...ಬಾರೋ ರಸಿಕ
ನೋಡೆನ್ನ ಈ ಥಳುಕಾ.. ಕೈಚಳಕಾ..
ಮೈಪುಳಕಾ..ಆ.ಆ.. ಆಹಾ ಚಳುಕಾ..
F: ಆಹಾ ನಿ..ನ್ನಾ ಬಿಡೆ ನೀ ನನ್ನ ಪಡೆ
ಬದುಕು ಪ್ರಣಯದ ಪ್ರತಿಬಿಂಬ..
ಹಾಲು ಹುಣ್ಣಿಮೆ ಮಧುತುಂಬಾ..ಆ...
ಹೀರು ಸುಧೆ..ಏರುತ್ತಾ ನಶೆ
ರಸದ ಹೊಳೆಯಲಿ ಇಳಿ ನೀನು..
ಈಜಿ ಸುಳಿಯಲಿ ಹೊಸ ಮೀನು..
M: ನೀಳರಾತ್ರಿಯ ಪ್ರಣಯ ಮೈತ್ರಿಗೆ
ಕಿಚ್ಚು ಹೊತ್ತಿಸೆ ನೀನು
ವಜ್ರಧಾರೆಯ ಮುತ್ತು ಮಳೆಯನು
ಎರಕ ಹೊಯ್ಯುವೆ ಬಾ ಬಾರೆ ಬಾ ಬಾರೆ ಬಾ
F: ಬಾ.ಬಾ.. ಬಳಿ ಬಾ..ಬಾ ಸುಖ ತಾ..ತಾ..
ಸಖ ಬಾ..ಬಾ.. ಬಳಿ ಬಾ...ಬಾ ಬಳಿ ಬಾ..ಬಾ
ಸುಖ ತಾ..ತಾ..ಆಹಾ.ಹಾ.
F: ಬಾ...ಬಾರೋ ರಸಿಕ
ನೋಡೆನ್ನ ಈ ಥಳುಕಾ..ಕೈಚಳಕಾ..
ಮೈಪುಳಕಾ..ಆ.. ಆಹಾ ಚಳುಕಾ
M: ಮದ್ದಾನೆ ನಾನಾಗಿ ಮದವೇರಿ ಬಂದೆ
ಮದನಾರಿ ನಿನ್ನಲ್ಲಿ ಮದವನ್ನು ಕಂಡೆ
ಹುಚ್ಚೆದ್ದು ಘೀಳಿಟ್ಟು ಹೊತ್ತಾರೆ ತನಕ
ಜಲದಲ್ಲಿ ಜಗ್ಗಾಡಿ ಮಾಡೋಣ ಜಳಕ