ಜೀವನದಿ (1996)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಕೋಟಿ
ಹಾಡಿದವರು: ರಾಜೇಶ, ಮಂಜುಳಾಗುರುರಾಜ
DEDICATED TO RAJANI &VEDA SISTERS
M : ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮೋ
ಒಹ್.. ...ಪದ್ಮಾವತೀಶ ಭಕ್ತಹೃದಯೇಶ ಸಂಕಟ ನಾಶ
ಗರುಡಾದ್ರಿವಾಸ ನಮೋ ನಮೋ
M :ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
F : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನೀಗುವೆ ಜನರ ಸಂಕಷ್ಟವ
M : ನೀ ತರುವೆ ಮನಕೆ ಸಂತೋಷವ
BOTH : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
================
F :ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವ ನಾಮವು
M :ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು
F :ಜೀವನವೇ ಆನಂದ ಆಳಿಉಳಿವು
ನಿನ್ನಿಂದ ಬಾಳಿಲ್ಲ ನೀನಿಲ್ಲದೇ
M :ಅರ್ಪಣೆಯ ಭಾವದಲಿ ನಿಂತಿರುಲು
ಎದುರಿನಲಿ ನೀ ಇಂದು ಕೃಪೆ ತೋರಿದೆ
F :ಭಾಗ್ಯದ ಮಳೆಯನ್ನು ನೀ ಕರೆಯುವೆ
ಗಂಡು :ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ
ನಮಗೆ... ಒಲಿದೆ...
ಪ್ರಭುವೇ... ಅರಿಯೇ.. ......
BOTH :ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
=================
M:ಪದ್ಮಾವತಿದೇವಿ ಕೈ
ಹಿಡಿದ ಮಹರಾಯ ಪಾಲಿಸೋ ಮಹನೀಯನೇ
F:ಅರಿಶಿನ ಕುಂಕುಮದ ಸೌಭಾಗ್ಯ
ನೀ ನೀಡು ಕಾಪಾಡು ಲಕ್ಷಿಮೀಶನೇ
M:ನಮಗೆಲ್ಲ ಶತ ವರುಷ ಬಾಳಿನಲಿ
ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ
F:ನಮ್ಮ ಮನೆ ಅಂಗಳದ ನಗೆ
ಎಂಬ ಸೌರಭವು ಸೂಸಿರಲಿ ಎಂದೆಂದಿಗೂ
M:ಕವಿದಿದ್ದ ಇರುಳನು ನೀ ನೀಗಿದೆ
F:ಹೊಸದೊಂದು ನಂಬಿಕೆಯ ನೀ ನೀಡಿದೆ
M:ನಮಗೆ... ಒಲಿದ...
ಪ್ರಭುವೇ.... ಅರಿಯೇ...
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
F:ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
F:ನೀ ನೀಗುವೆ ಜನರ ಸಂಕಷ್ಟವ
M:ನೀ ತರುವೆ ಮನಕೆ ಸಂತೋಷವ
BOTH :ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
BY ***CHETHAN***