menu-iconlogo
logo

Belaguva Surya

logo
লিরিক্স
ಬೆಳಗುವ ಸೂರ್ಯನೇ ಬದುಕಿರಲಾರ ಸಂಜೇ ವೇಳೆಗೆ...

ಉರುಳುವ ಚಂದ್ರನೇ ಉಳಿದಿರಲಾರ ಮುಂಜಾನೆಗೇ...

ಈ ಜಗದಾ ಜೀವ ಯಾತ್ರೇ ಬರಿಯ ಮೂರೇ ದಿನಾ...

ಕಂಡಂತೇ ಮಾಯವಾಗದೇನು ಮಿಂಚು

ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ

ಕಲ್ಲಿನಲ್ಲೂ ನೀರುಂಟೂ ಕಣ್ಣಿರಲ್ಲೂ ನಗೆಯುಂಟೂ

ಮುಳ್ಳಲ್ಲೂ ಹೂವ ಗಂಧ ಉಂಟೂ ನೋಡು

ಹಾಡು ಬಾ ನಗೆ ಮಲ್ಲಿಗೆ

ನಾಳೆಯ ಕನಸೊಂದಿಗೇ...

ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ ಕುಣಿದು ಕುಪ್ಪಳಿಸೋ ಅಲೆಗಳಿಗೇ...

ಸಾವಿರ ವರ್ಷಗಳೇತಕೆ ಬೇಕೂ ನಿಮಿಷಾ ಸಾಲದೇ...

ಕೋಗಿಲೆಗೋ ಹಲವು ಮಾಸಾ...

ಚಿಗುರೆಲೆಗೋ ಕೆಲವೇ ದಿವಸಾ...

ಹುಟ್ಟೋ ಪ್ರತಿ ಮನುಜ ಕಣ್ಮಮುಚ್ಚೋದು ಸಹಜಾ

ಮತ್ತೆ ಗರ್ಬದಲೀ ಕಣ್ತೆರೆಯೊದು ಸಹಜಾ

ಮಮತಾನುಬಂಧ ಒಂದೇ ಬಂಧ ಇಲ್ಲಿ

ಹಾಡು ಬಾ...ನಗೆ ಮಲ್ಲಿಗೆ... ನಾಳೆಯ... ಕನಸೊಂದಿಗೇ...

ಬಾನಿಗೂ ಭೂಮಿಗೂ ಬೇಧವೇ ಕಾಣದು ದೂರ ದಿಗಂತದ ಅಂಚಿನಲೀ...

ಆದರೂ ಒಂದರನೊಂದು ಸೇರದು ಅದುವೇ ಸತ್ಯ...

ಪಂಜರದಾ ದೇಹ ಕುಲುಕೀ...

ಪ್ರಾಣವಿದೂ ಹಾರೋ ಹಕ್ಕಿ...

ಮೋಹಾ ವ್ಯಾಮೋಹಾ ಬಿಡದಂತ ಮಾಯೇ

ಎಲ್ಲಾ ನಮದೆನ್ನೋ ಸಂಬಂಧ ಸರಿಯೇ

ವಿಧಿ ನೇಮಕಿಂತ ಬೇರೆ ಸ್ವಂತ ಇಲ್ಲಾ

ಹಾಡು ಬಾ ನಗೆ ಮಲ್ಲಿಗೆ

ನಾಳೆಯ ಕನಸೊಂದಿಗೇ

ಕಲ್ಲಿನಲ್ಲೂ ನೀರುಂಟೂ ಕಣ್ಣಿರಲ್ಲೂ ನಗೆಯುಂಟೂ

ಮುಳ್ಳಲ್ಲೂ ಹೂವ ಗಂಧ ಉಂಟು ನೋಡು

ಹಾಡು ಬಾ...ನಗೆ ಮಲ್ಲಿಗೇ...

ನಾಳೆಯ...ಕನಸೊಂದಿಗೇ...