ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಮರುಳೀಗ ಮಿತಿಮೀರಿ ನನಗಂತೂ ದಿಗಿಲು
ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ನನಗಂತೂ ಯಾರಿಲ್ಲ ನಿನಗಿಂತ ಮಿಗಿಲು
ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ಬಾರೆ ಬಳಿ ಬಾರೆ ಏಕೆ ಕಾಲಹರಣ
ಎಲ್ಲ ಪಿಸುಮಾತು ಮುತ್ತಾಗೋ ಲಕ್ಷಣ
ತಿಳಿಯದೆ ತೆರೆದಿದೆ ಕನಸಿನ ಕದ
ಅರಿಯದೆ ಅರಳಿದೆ ಹಸಿಬಿಸಿ ಪದ
ಹರೆಯ ನೋಡಿದೆ ಮಾತಾಡಲು
ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ನಿನ್ನ ಉಸಿರಿಂದ ನೇರ ಜೀವದಾನ
ಜೀವ ಹಸಿರಾಗಿ ಬದುಕೀಗ ಶ್ರಾವಣ
ಪರದೆಯ ಸರಿಸಿದೆ ಪರವಶ ಮನ
ಹೃದಯವೆ ಅರಿತಿದೆ ಹೃದಯದ ಗುಣ
ಸಮಯ ನಿಂತಿದೆ ಹಾರೈಸಲು
ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ಮರುಳೀಗ ಮಿತಿಮೀರಿ ನನಗಂತೂ ದಿಗಿಲು
ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಅಮಲು ಅಮಲು ಅಮಲು
Track Courtesy Shyam9980