ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಅಮ್ಮಾ.. ಅಮ್ಮಾ, ಅಮ್ಮಾ ನಮ್ಮಮ್ಮ
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಅಮ್ಮನು ತಾನೆ
ಅಮ್ಮನು ತಾನೇ
ದೇವತೆಯಂತೆ, ಭೂಮಿಗೆ ಬಂದಳು
ಪ್ರೇಮದ ಸಿರಿಯ, ನನಗಾಗಿ ತಂದಳು
ದೇವತೆಯಂತೆ, ಭೂಮಿಗೆ ಬಂದಳು
ಪ್ರೇಮದ ಸಿರಿಯ, ನನಗಾಗಿ ತಂದಳು
ನನ್ನಲ್ಲಿ ಆನಂದ ತುಂಬಿ..
ಸವಿಮಾತಿನ, ಸುಖ ನೀಡುತ
ಸವಿಮಾತಿನ ಸುಖ ನೀಡುತ
ಒಳ್ಳೊಳ್ಳೆ ಕಥೆಯನ್ನು ಹೇಳಿ..
ಉಲ್ಲಾಸ, ಸಂತೋಷ, ತಂದಳು..
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೆ
ಅಮ್ಮಾ.. ಅಮ್ಮಾ ಅಮ್ಮಾ ನಮ್ಮಮ್ಮ
ಅಮ್ಮನ ಮಡಿಲು, ಸ್ವರ್ಗದ ಹಾಗೆ
ಅಮ್ಮನ ನುಡಿಯು, ಜೇನಿನ ಹಾಗೆ
ಅಮ್ಮನ ಮಡಿಲು, ಸ್ವರ್ಗದ ಹಾಗೆ
ಅಮ್ಮನ ನುಡಿಯು, ಜೇನಿನ ಹಾಗೆ
ಅಮ್ಮನು ನನ ಪ್ರಾಣದಂತೆ
ಬೇರೇನನು ನಾ ಕೇಳೇನು
ಬೇರೇನನು ನಾ ಕೇಳೇನು
ಎಂದೆಂದು ಜೊತೆಯಲ್ಲಿ ಹೀಗೇ
ಇರುವಾಸೆ, ನನಗಿಂದು, ಅಮ್ಮಾ..
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೇ
ಅಮ್ಮಾ.. ಅಮ್ಮಾ ಅಮ್ಮಾ ನಮ್ಮಮ್ಮ
ಕಣ್ಣಿಗೆ ಕಾಣುವ ದೇವರು ಎಂದರೆ
ಅಮ್ಮನು ತಾನೆ.. ಅಮ್ಮನು ತಾನೇ
ಅಮ್ಮನು ತಾನೇ ಅಮ್ಮನು ತಾನೇ