ಏಳು ಜನ್ಮ ಇದ್ದರೆ
ಹೆಣ್ಣಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ
ಹೆಣ್ಣಾಗಿ ಹುಟ್ಟಿದರೆ
ಶಿವನನ್ನು ಕೇಳುವುದು ಒಂದೇ
ಪತಿದೇವ ನೀನಾಗು ಎಂದೇ
ಏಳು ಜನ್ಮ ಇದ್ದರೆ
ಗಂಡಾಗಿ ಹುಟ್ಟಿದರೆ
ಏಳು ಜನ್ಮ ಇದ್ದರೆ
ಗಂಡಾಗಿ ಹುಟ್ಟಿದರೆ
ಶಿವನನ್ನು ಕೇಳೋದು ಒಂದೇ
ಧರ್ಮ ಪತ್ನಿ ನೀನಾಗು ಎಂದೇ
ಆ.. ಆ ..ಆ ...ಆ .........
ನೀನು ಜೊತೆಯಲ್ಲಿದ್ದರೆ
ಭೂಮಿ ಸ್ವರ್ಗ ಓ ದೊರೆ
ನೀನು ಜೊತೆಯಲ್ಲಿದ್ದರೆ
ಭೂಮಿ ಸ್ವರ್ಗ ಓ ದೊರೆ
ನಿನ್ನ ಪಡೆದ ನಾನೆಷ್ಟು ಧನ್ಯ..
ನೀನಿರದ ಈ ಲೋಕ ಶೂನ್ಯ
ನೀನು ಬಳಿಗೆ ಬಂದರೆ
ಪ್ರೀತಿ ಮಾತನಾಡಿದರೆ
ನೀನು ಬಳಿಗೆ ಬಂದರೆ
ಪ್ರೀತಿ ಮಾತನಾಡಿದರೆ
ನಾಕಂಡೆ ದೇವಿಯ ರೂಪ....
ನನ್ನ ಬಾಳಿನಾ ನಂದಾ ದೀಪ ..
ಆ ಆ ಆ ಆ ಆ ಆ ಆ......
ನನಗೆ ಸಾವು ಬಂದರೆ
ಏನಿಲ್ಲ ತೊಂದರೆ
ನನಗೆ ಸಾವು ಬಂದರೆ
ಏನಿಲ್ಲ ತೊಂದರೆ
ನಿನ್ನ ಮುಂದೆ ಈ ಪ್ರಾಣ ಹೋಗಲಿ..
ಮುತ್ತೈದೆ ಭಾಗ್ಯ ನನಗೆ ದೊರಕಲಿ
ನೀನು ಇರದ ಜನ್ಮ
ನನಗೇಕೆ ಬೇಕು ಬ್ರಹ್ಮ
ನೀನು ಇರದ ಜನ್ಮ
ನನಗೇಕೆ ಬೇಕು ಬ್ರಹ್ಮ
ಜೊತೆಯಲ್ಲೇ ಈ ಪ್ರಾನ ಹೋಗಲಿ
ಸ್ವರ್ಗದಲ್ಲೇ ನಮ್ಮ ಮಿಲನವಾಗಲಿ
ಆ ಆ ಆ ಆ ಆ ಆ.....
ಆ ಆ ಆ ಆ ಆ ಆ ....