ಯಾವ ದೇವ ಶಿಲ್ಪಿ ಕಡೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರನೆಂದು ಏರಿ ಬಂದ ಚೆನ್ನ
ಬಿರುಗಾಳಿ ಯಂತೆ ಹೊತ್ತು ಹೋದೆ ನನ್ನ
ಊರ್ವಶಿಯ ತಂಗಿಯೋ
ಮಾತನಾಡೋ ಇಳೆಯೊ
ಮನ್ಮಥನ ತಮ್ಮನೋ
ವಾತ್ಸಾಯನ ನಣ್ಣನೊ
ನಿನ್ನಲೇ .. ನಾ ಸೇರಿ ಹೋದೆ ಏ
ಯಾವ ದೇವ ಶಿಲ್ಪಿ ಕಡೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರನೆಂದು ಏರಿ ಬಂದ ಚೆನ್ನ
ಬಿರುಗಾಳಿ ಯಂತೆ ಹೊತ್ತು ಹೋದೆ ನನ್ನ
ತನು ಮನ ಎರಡರ ಮಿಲನ
ಹೊಸಕವನ ಇಂದು ಬರೆದಿದೆ
ನಯನವು ಮೌನದಿ ಸುಖದ
ಅನುಭವದ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರು ಬಾ
ಓ ಪ್ರಿಯತಮೆ
ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ
ಓ ... ಪ್ರಿಯತಮ
ಮುದ್ದು ಮುಖ ನನ್ನ ಆಸೆ ಕೆಣಕಿದೆ
ತಾಳು ತಾಳು ಏಕೆಂದೆ
ಗುಂಗಲೇ..... ನಾ ತೇಲಿ ಹೋದೆ
ಯಾವ ದೇವ ಶಿಲ್ಪಿ ಕಡೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರನೆಂದು ಏರಿ ಬಂದ ಚೆನ್ನ
ಬಿರುಗಾಳಿ ಯಂತೆ ಹೊತ್ತು ಹೋದೆ ನನ್ನ
ಮುತ್ತು ಮುತ್ತು ಗಿಣಿಯೇ ಏ ಏ ಏ
ಕಣ್ಣಿನಲ್ಲೇ ಕೊಂದೆ ಇನಿಯೆ ಏ ಏ ಏ
ರಾಗ ತಾಳ ಸೇರಿದಂತೆ ಇನಿಯ
ಉಸಿರುಸಿರ ಸುಖ ಸಂಗಮ
ಜೀವವೀಣೆ ಮೀಟಿದಂತೆ ಏಕೋ
ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲು ಬಾ
ಓ ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲು ಬಾ
ಓ ... ಪ್ರಿಯತಮೆ
ಕಾಲ ಹೀಗೆ ತಾನು ನಿಂತು ಹೋಗದೆ
ಸ್ವರ್ಗ ಇಲ್ಲೇ ನೋಡೆಂದೇ
ಗುಂಗಲಿ .... ನಾ ತೇಲಿ ಹೋದೆ
ಯಾವ ದೇವ ಶಿಲ್ಪಿ ಕಡೆದನೋ ನಿನ್ನ
ಹಾ ಹಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರನೆಂದು ಏರಿ ಬಂದ ಚೆನ್ನ
ಆ ಆ
ಬಿರುಗಾಳಿ ಯಂತೆ ಹೊತ್ತು ಹೋದೆ ನನ್ನ