ಚಿತ್ರ : ರಥಸಪ್ತಮಿ (1986)
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮತ್ತು ಎಸ್. ಜಾನಕಿ ಅಮ್ಮ
ಸಂಗೀತ : ಉಪೇಂದ್ರ ಕುಮಾರ್
ಸಾಹಿತ್ಯ : ಚಿ .ಉದಯಶಂಕರ್
M: ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ.....
F: ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ.....
M: ಆ ಬಾನ ನೆರಳಲ್ಲಿ
ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ
ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ
ಮಾತೊಂದ ನುಡಿವ
Bit Music
F: ಈ ಸಂಜೆ ರಂಗಲ್ಲಿ
ಈ ತಂಪು ಗಾಳಿಲಿ
ಜೊತೆಯಾಗಿ ನಾವೀಗ
ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ
ಮಾತೊಂದ ನುಡಿವಾ
M: ನೀನೆ ನನ್ನ ಪ್ರಾಣ
F: ನಮ್ಮ ಪ್ರಣಯ ಮಧುರ ಗಾನ
M: ನೀನೆ ನನ್ನ ಪ್ರಾಣ
F: ನಮ್ಮ ಪ್ರಣಯ ಮಧುರ ಗಾನ
Both: ನಿನ್ನ ಬಿಡಲಾರೆ ನಾನೆಂದಿಗೂ.....
F: ಜೊತೆಯಾಗಿ
M: ಹಿತವಾಗಿ
F: ಸೇರಿ ನಡೆವ
M: ಸೇ..ರಿ ನುಡಿವ
F: ಕನಸಲ್ಲಿ ಕಂಡಾಸೆ
ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ
ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ
ನನ್ನಾಣೆ ನಲ್ಲ
Bit Music
M: ಹಗಲಲ್ಲಿ ಕಂಡಾಸೆ
ಇರುಳಲ್ಲಿ ಬಂದಾಸೆ
ಎಲ್ಲವೂ ಒಂದೇನೇ
ನಿನ್ನೊಡನೆ ಇರುವಾಸೆ
ಬೇರೇನೂ ನಾ ಕೇಳೆ
ನನ್ನಾಣೆ ನಲ್ಲೆ
F: ಎಂದೂ ಹೀಗೆ ಇರುವ
M: ನಾವು ಎಂದೂ ಹೀಗೆ ನಲಿವ
F: ಎಂದೂ ಹೀಗೆ ಇರುವ
M: ನಾವು ಎಂದೂ ಹೀಗೆ ನಲಿವ
Both: ನಿನ್ನ ಬಿಡಲಾರೆ ನಾನೆಂದಿಗೂ...
Both: ಲಲ ಲಾಲಾ
both: ಲಲ ಲಾಲಾ
M: ಸೇರಿ ನಡೆವ
F: ಸೇರಿ ನುಡಿವ
M: ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
F: ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
Both: ನಿನ್ನ ಬಿಡಲಾರೆ ನಾನೆಂದಿಗೂ ...