ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ
ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ...
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ..
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ...
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ....
ಹಗಲೇನು ಇರುಳೇನು
ಮನದಾಸೆ ಮರೆಯಾಗಿದೆ...
ಸಾವೇನು ಬದುಕೇನು ಏಕಾಂಗಿ ನಾನಾಗಿರೆ....
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ... ಹೂವಂತೆ ನೀ
ಇರುಳಲ್ಲಿಯೂ... ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ...
ಇಂದೇತಕೊ ನಾನಿನ್ನಲಿ
ಬೆರೆವಂತ ಮನಸಾಗಿದೆ....
ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ....
ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ....