ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬಲಿಯಾಯಿತೇ ಬದುಕು ವಿಧಿಯಾಟಕೆ
ಬಲಿಯಾಯಿತೇ ಬದುಕು ವಿಧಿಯಾಟಕೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಏಕೆ ಅಳುವೇ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲ್ಲಿ ನಾನು ಬೆರೆವೆ..
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ..
ಇರಲಾರೆ ನಾ ಕ್ಷಣವೂ.. ನಿನ್ನ ಕಾಣದೆ..
ಇರುಳಲ್ಲವೇ ಜಗವು.. ನೀನಿಲ್ಲದೆ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ..
ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ..
ಕಣ್ಣ ನೀರು ಬಾರದಾಯ್ತು ನಿನ್ನ ಮಾತಿಗೆ
ಚಿಂತೆ ಕೂಡ ದೂರವಾಯ್ತು ಪ್ರೇಮ ಭಾಷೆಗೆ..
ನಗೆ ತುಂಬಿದ ಬದುಕು ಹಗೆಯಾಯಿತೇ..
ಉಸಿರಾಟವೇ ನಮಗೆ ಹೊರೆಯಾಯಿತೇ..
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ.. ಏನಿದೆ..