menu-iconlogo
logo

Yevva Yevva

logo
লিরিক্স
ಯವ್ವ ಯವ್ವಾ.... ಹಾ

ಯವ್ವ ಯವ್ವಾ ನಾ ಹೆಂಗೆ ಬಾಳಲೆ

ಇಂತ ಗಂಡನ್ಕೂಡ ಹೆಂಗೆ ಬಾಳಲೆ

ಯವ್ವ ಯವ್ವಾ ನಾ ಹೇಗೆ ಬಾಳಲಿ

ಇಂತ ಗಂಡನ್ಕೂಡ ಹೇಗೆ ಬಾಳಲಿ

ಜೊಲ್ಲು ಸುರಿಸೋನು ಈ ಭಂಡ ನನ ಗಂಡ

ನಾರಿಯರ ..... ಜೋಕುಮಾರ

ನನ್ನ ಕಂಡ್ಕೂಡ್ಲೇ ಮಂಕಾಗಿ ಹರೋಹರ

ಮಿಡಿ ಕಂಡಾಗ ರೆಡಿ ಈ ಗಡಿಬಿಡಿ ಗಂಡ

ಮಿಡಿಯುತಾನೆ..... ಎಡವುತಾನೆ

ಸಿಕ್ಕಿಬಿದ್ದಾಗ ನನ ಕಾಲ ಹಿಡಿಯುತಾನೆ

ಅಯ್ಯೋ ಗಯ್ಯಾಳಿ ನೀ ಹೆಂಡತಿ

ಯಾಕೆ ನನ್ ಪ್ರಾಣವ ಹಿಂಡುತಿ...

ಯವ್ವ ಯವ್ವಾ....

ಯವ್ವ ಯವ್ವಾ ನಾ ಹೆಂಗೆ ಬಾಳಲೆ

ಇಂತ ಗಂಡನ್ಕೂಡ ಹೆಂಗೆ ಬಾಳಲೆ

ಯವ್ವ ಯವ್ವಾ ನಾ ಹೇಗೆ ಬಾಳಲಿ

ಇಂತ ಗಂಡನ್ಕೂಡ ಹೇಗೆ ಬಾಳಲಿ

ಮಂಚ ಮ್ಯಾಲೇರುತಲೇ ಗೊರಕೆ ಹೊಡೆಯುತಾನೆ

ಹ್ಯಾಗೆ ತಾನೇ ....ಏಳುತಾನೆ

ಎದ್ರೆ ಕೆಲ್ಸಾಂತ ಆಫೀಸಿಗೆ ಹೋಗುತಾನೆ

ಮಳ್ಳ ಮಾತಲ್ಲೇ ದಾಸ್ವಾಳ ಕಿವಿ ಮ್ಯಾಲೆ

ಇಕ್ಕುತಾನೆ...... ತಿಕ್ಕುತಾನೆ

ಒಳ್ಳೆ ಲವ್ ಮಾಡೋ ಮೂಡಲ್ಲಿ ಬಿಕ್ಕುತಾನೆ

ಅಯ್ಯೋ ಯಾಕಿಂತ ಮಾತು ಮೋಹಿನಿ

ಟಿವಿ ಸೀರಿಯಲ್ಲು ನೋಡಿ ಕೆಟ್ಟೆ ನೀ...

ಯವ್ವ ಯವ್ವಾ.... ಆ ಆ ಆ

ಯವ್ವ ಯವ್ವಾ ನಾ ಹೇಗೆ ಬಾಳಲಿ

ಇಂತ ಗಂಡನ್ಕೂಡ ಹೇಗೆ ಬಾಳಲಿ

ಯವ್ವ ಯವ್ವಾ ನಾ ಹೆಂಗೆ ಬಾಳಲೆ

ಇಂತ ಗಂಡನ್ಕೂಡ ಹೆಂಗೆ ಬಾಳಲೆ