ಕೇಳು ಮಗುವೆ ಕಥೆಯ..
ಆಸೆ ತಂದ ವ್ಯಥೆಯ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
Music
ಜನಕರಾಜ ಬೆಳೆಸಿದ ಮುದ್ದಿನ ವನಿತೆ..
ಸುಖದ ಸೋಪಾನದಲ್ಲಿ ಸುಂದರಿ ಸೀತೆ...
ಜಗದ ಮಲ್ಲರೆಲ್ಲರೂ..ಊ..
ಜಗದ ಮಲ್ಲರೆಲ್ಲರೂ.. ಶರಣು ಎಂದ ಶಿವಧನು..
ಎತ್ತಿದ ಶ್ರೀರಾಮನ ಮಡದಿಯಾದಳು...
ಸೀತೆ ಒಡತಿಯಾದಳು...
Music
ಆಸೆಯ ಸವಿಯಿಂದ ಮದುವೆಯ ಅನುಬಂಧ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
Music
ರಾಜನು ಶ್ರೀರಾಮನೇ ಆಗುವನೆಂದೂ...
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದೂ...
ರಾಜನು ಶ್ರೀರಾಮನೇ ಆ..ಗುವನೆಂದೂ...
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದೂ...
ಕಟ್ಟಿದಂತ ಸೀತೆಯ ಕನಸ ಹೊನ್ನ ಗೋಪುರ..
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ..
ಉರಿದು ವಿಷದ ಮಾತಿನಿಂದ ತಂದಳು
ಕಣ್ಣೀರ..ಮಂದರೆ ತಂದಳು ಕಣ್ಣೀರ... ಆ....
Music
ಆಸೆಯ ಸವಿಯಿಂದ ಮುಗಿಯಿತು ಆನಂದ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
Music
ವನವಾಸಿಯಾದಳು ಸಾರ್ವಭೌಮನ ರಾಣಿ...
ನೆರಳಂತೆ ನಡೆದಳು ಸಹಧರ್ಮಿಣಿ...
ಕಂಡೂ ಬಂಗಾರದ ಬಣ್ಣದ ಜಿಂಕೆ.. ಎ..
ಸೀತೆ ಮನವ ಕಲಕಿತೂ ಮೋಸದ ಬಯಕೆ..
ವಂಚನೆಯ ಸುಳಿ ತರಲು ಘೋರ ಅಗಲಿಕೆ...
ವಂಚನೆಯ ಸುಳಿ ತರಲು ಘೋರ ಅಗಲಿಕೆ...ಎ..
ಗುರಿಯಾದಳು ಸೀತೆ ಅಪಾರ
ಶೋಕಕೆ... ಅಪಾರ ಶೋಕಕೆ...ಎಎ...
Music
ಆಸೆಯ ಸವಿಯಿಂದ.. ಬವಣೆಯ ವಿಧಿ ತಂದ..
ಕೇಳು ಮಗುವೆ ಕಥೆಯ.. ಆಸೆ ತಂದ ವ್ಯಥೆಯ..
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ.. ಹ... ಆಸೆ ತಂದ ವ್ಯಥೆಯ..