꧁ಮೊದಲಾಸಲ?ಯಶು꧂
M ಇರಲಾರೆ ಚೆಲುವೆ
ಎಂದಿಗು ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೆ....
F ಇರಲಾರೆ ಒಲವೆ
ಎಂದಿಗು ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲಿ ನನ್ನನ್ನೆ ಚೆಲ್ಲೀ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೆ....
M ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
Music
M ನೀ ನನಗೊಲಿದ ಕ್ಷಣದಿಂದ
ಈ ಭೂಮಿಗೆ ಹಸಿರು ವರವಾಯ್ತು
ನಿನ್ನೊಳಗಿರುವ ಸುಖಗಳಿಗೆ
ಮುಗಿಲಿಗು ಬಣ್ಣ ಬಂದಾಯ್ತು
F ನೀ ನನಗೊಲಿದ ಕ್ಷಣದಿಂದ
ನನ್ನುಸಿರಿಗು ಜೀವ ಬಂದಾಯ್ತು
ನಿನ್ನೊಡಗಿರುವ ಪ್ರತಿ ಕ್ಷಣವು
ಸ್ವರ್ಗವೆ ನನ್ನ ವಶವಾಯ್ತು
M ಜೀವದಾಣೆ F ಓ ಜನ್ಮದಾಣೆ
M ನನ್ನ ಪ್ರೀತಿ F ನೀನೆ ತಾನೆ....
M ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
F ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
Music
F ನಿನ್ನನು ಕಂಡ ದಿನದಿಂದ
ಈ ರೂಪವೆ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ
ನಿತ್ಯವು ಹುಣ್ಣಿಮೆ ನನಗಾಯ್ತು
M ಇದ್ದರೆ ನಿನ್ನೊಡನಿರಬೇಕು
ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆ ಬೆರಿಬೇಕು
ಸುಂದರ ಕವಿತೆಯ ಬರಿಬೇಕು
F ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
M ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
F ಜೀವದಾಣೆ M ಜನ್ಮದಾಣೆ
F ನನ್ನ ಪ್ರೀತಿ M ನಿನಗೆ ತಾನೆ....
M ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
F ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
꧁ಮೊದಲಾಸಲ?ಯಶು꧂