ಚಿತ್ರ: ಶ್ರೀ ಶ್ರೀನಿವಾಸ ಕಲ್ಯಾಣ (1974)
ಗಂ: ಚೆಲುವಿನ ತಾರೆ..ತಾರೆ..ತಾರೆ..
ಒಲವಿನ ಧಾರೆ...
ಭಾಮಿನಿ ಬಾರೇ..
ಅಗಲಿರಲಾರೆ
ಚೆಲುವಿನ ತಾರೆ,
ಒಲವಿನ ಧಾರೆ
ಭಾಮಿನಿ ಬಾರೇ,
ಅಗಲಿರಲಾರೆ
ಕನಸಲು ನೀನೇ,
ಮನಸಲು ನೀನೇ,
ಕನಸಲು ನೀನೇ,
ಮನಸಲು ನೀನೇ,
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ
ಹೆ: ಸ್ವಾಮಿಯು ನೀನು,
ಸೇವಕಿ ನಾನು,
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಚಿತ್ರ: ಶ್ರೀ ಶ್ರೀನಿವಾಸ ಕಲ್ಯಾಣ (1974)
ಗಂ: ನೆನೆಯುತ ನಿನ್ನ ಕರೆಯುವ ಮುನ್ನ
ದರುಶನಕೆಂದೇ ಧಾವಿಸಿ ಬಂದೆ
ಹೆ: ನನ್ನೇ ನಿನಗೆ ಕಾಣಿಕೆ ತಂದೆ
ಸ್ವೀಕರಿಸೆನ್ನ ಕರುಣಿಸಿ ಇಂದೇ
ಗಂ: ಓ.. ನಿನ್ನಲ್ಲಿ ನಾನು ಒಂದಾಗಿರಲು
ಪ್ರೇಮದ ಕಾಣಿಕೆ ನನಗಿನ್ನೇಕೆ
ಭಾಮಿನಿ ಬಾರೇ ಅಗಲಿರಲಾರೆ
ಹೆ: ಸ್ವಾಮಿಯು ನೀನು, ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಚಿತ್ರ: ಶ್ರೀ ಶ್ರೀನಿವಾಸ ಕಲ್ಯಾಣ (1974)
ಹೆ: ಆಸೆಯ ಲತೆಗೆ ಆಸರೆಯಾದೆ
ಬಾಳಿನ ಬಾನಿಗೆ ಭಾಸ್ಕರನಾದೆ
ಗಂ: ಪ್ರೇಮದ ಸುಮದ ಸೌರಭವಾದೆ
ಪ್ರಣಯದ ಪಯಣಕೆ ನೀ ಜೊತೆಯಾದೆ
ಹೆ: ಓ.. ನಿನ್ನನುರಾಗದ ಉಯ್ಯಾಲೆಯಲಿ
ತೂಗುತ ಆಡುವ ಭಾಗ್ಯವ ಕಂಡೆ
ಬಾ ಹೃದಯೇಶ, ಪ್ರಭು ಶ್ರೀನಿವಾಸ
ಗಂ: ಕನಸಲೂ ನೀನೇ,
ಮನಸಲೂ ನೀನೇ
ಹೆ: ನನ್ನೀ ಪ್ರಾಣದ ಪ್ರಾಣವು ನೀನೇ
ಇಬ್ಬರೂ: ಕಾಣದೆ ನಿನ್ನ ನಾನಿರಲಾರೆ
ಗಂ: ಚೆಲುವಿನ ತಾರೆ,
ಒಲವಿನ ಧಾರೆ
ಭಾಮಿನಿ ಬಾರೇ
ಅಗಲಿರಲಾರೆ,
ಅಗಲಿರಲಾರೆ,
ಅಗಲಿರಲಾರೆ.