(M) ಚೆಲುವಾದ ಮುದ್ದಾದ ನಿನ್ನಂತೆ
ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
(F) ಹೂಂಹ್ , ಚೆಲುವಾದ ಮುದ್ದಾದ
ನಿಮ್ಮಂತೆ ಇರುವ ಗಂಡಾಗಲಿ
ಆ ಮಗುವಿಂದ ಆನಂದ ನಮಗಾಗಲಿ
(M) ಸೀತೆಯ ತಾಳ್ಮೆ, ಗಿರಿಜೆಯ ಒಲುಮೆ
ರತಿಯ ಅಂದವು ,ನಿನ್ನಲ್ಲಿದೆ
ನಿನ್ನನ್ನು ಹೋ..ಲುವ ಚಂದದ ಹೆಣ್ಣೇ
ಈ ಮಡಿಲಲಿ ಮಲಗಲಿದೆ
(F) ರಾಮನ ನೀ..ತಿ ಭರತನ ಪ್ರೀತಿ
ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
ರಾಮನ ನೀ..ತಿ ಭರತನ ಪ್ರೀತಿ
ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
ನಿಮ್ಮನು ಹೋಲುವ ಅಂದದ ಗಂಡೇ
ಒಲವಿನ ಹೂವಾಗಿ, ಅರಳಲಿದೆ
(M) ಚೆಲುವಾದ ಮುದ್ದಾದ
ನಿನ್ನಂತೆ ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
Music
(F) ಏತಕೆ ಮಾತು ವಿಷಯವು ಗೊತ್ತು
ಈ ಸಲ ಗಂ..ಡೇ ಆಗುವುದು
ಎಲ್ಲರು ಕಂಡು ಆಸೆಯ ಪಡುವ
ಭೂಪತಿ ಗಂ...ಡೇ ಹುಟ್ಟುವುದು
(M)ಏತಕೆ ವಾದ ನಮ್ಮಲ್ಲಿ ಬೇಧ
ಹೇಳುವೆ ಬಾ ಏನಾಗುವುದು
ಏತಕೆ ವಾ...ದ ನಮ್ಮಲ್ಲಿ ಬೇಧ
ಹೇಳುವೆ ಬಾ... ಏನಾಗುವುದು
ಅವಳಿ ಜವಳಿ ಹೆಣ್ಣು ಗಂಡು
ಎರಡೂ ಕೈಗೆ ಒಂದೊಂದು
(M F) ಚೆಲುವಾದ ಮುದ್ದಾದ
ನಮ್ಮಂತೆ ಇರುವ ಮಕ್ಕಳಾಗಲಿ
ಆ ಮಕ್ಕಳಿಂದ ಜಗವೆಲ್ಲಾ ಬೆಳಕಾಗಲಿ
ಅಹ್ಹಹ ಅಹ್ಹಹ ಅಹ್ಹಹ
(S) ರವಿ ಎಸ್ ಜೋಗ್ (S)