menu-iconlogo
logo

Kaarmoda Saridhu

logo
Liedtext
ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ

ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

ಖುಷೀಲೂ ಕೂಡ ಹತಾಶೆ ನಿರಾಳದಲ್ಲೂ ನಿರಾಶೆ

ಇದೇ ತಮಾಷೆ, ಗೆದ್ದು ಸೋತಿರುವೆ

ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ

ಈ ಕಂಬನಿಯನು ಒರೆಸೋ ಕೈಯ್ಯಿ ಜೊತೆಗೆ ಇಲ್ಲ

ಬಿಸಿಲು ನೆತ್ತಿಯ ಸುಡುವಾಗ ಬಂದಿದೆ ಮಳೆಯ ಶುಭಯೋಗ

ಕಂಡೆನು ಅಕ್ಕರೆ ಮಳೆಬಿಲ್ಲಾ ಸಿಹಿ ವಿಚಾರ

ಒಂಥರಾ ಆಗಿದೆ ಬಲಿದಾನ

ಒಂಥರಾ ಸಿಕ್ಕಿದೆ ಬಹುಮಾನ

ಮರೆಯುವುದು ಹೇಗೆ ನಿನ್ನ ತುಂಬಾ ಕಠೋರ

ಕಣ್ಣೆರೆಡು ತುಂಬಿ ಹೋಗಿವೆ

ಖುಷಿಗೊಂದು ಒಂದು ದುಃಖಕ್ಕೆ

ನಿಶಬ್ಧದಲ್ಲೂ ಗಲಾಟೆ ನಿಗೂಢವಾದ ತರಾಟೆ

ಇದೇ ತಮಾಷೆ, ಗೆದ್ದು ಸೋತಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ

ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

ಅನುರಾಗದ ಶೋಧನೆ ಅಂದು

ಬದುಕೆನ್ನುವ ಬೋಧನೆ ಇಂದು

ಕಾಲ ನಿನ್ನ ಕೈ ಗಡಿಯಾರ ಎಂಥಾ ವಿಚಿತ್ರ

ಒಂಥರಾ ಹತ್ತಿಯ ಗುಣ ನಿಂದು

ಒಂಥರಾ ಕತ್ತಿಯ ಛಲ ನಂದು

ಇರಿಸು ಮುರಿಸು ಸಹಜನೇ ಯಥಾ ಪ್ರಕಾರ

ಹೀಗೆ ಬಂದು ಹಾಗೆ ಹೋಗುವ

ಮಂಜಾದೆ ನೀನು ನನಗೆ

ವಿನೋದದಲ್ಲೂ ಅಭಾವ, ವಿಭಿನ್ನವಾದ ಪ್ರಭಾವ

ಇದೇ ತಮಾಷೆ, ಪಡೆದು ಕಳೆದಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ

ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ