menu-iconlogo
logo

Yarige Salutte Sambala

logo
Liedtext
ಮೇಲ ಫಿಮೇಲ

ಮೇಲ. ಫಿಮೇಲ

ಮೇಲ ಫಿಮೇಲ

ಮೇಲ ಫಿಮೇಲ

ಮೇಲ. ಫಿಮೇಲ

ಮೇಲ ಫಿಮೇಲ..

ಮೊಟ್ಟೆ ಮೊದಲಾ ಕೋಳಿ ಮೊದಲಾ ವೃಕ್ಷ ಮೊದಲಾ ಬೀಜ ಮೊದಲಾ ಬಿಡಿ ಬಿಡಿ ಗಾದೆಯ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಹೆಂಗಸಿರಿಲ್ಲದೆ ಬಾಳಿಲ್ಲ

ಬಿಡಿ ಬಿಡಿ ಒಗಟಿನ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಗಂಡಸರಿಲ್ಲದೆ ಕೂಳಿಲ್ಲ

ಬಯಲು ಗುಡಿಗೊ ಗುಡಿಗೆ ಬಯಲೊ ನದಿಗೆ ದಡವೊ ದಡಕೆ ನದಿಯೊ ಬಿಡಿ ಬಿಡಿ ಶರಣರ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಹೆಂಗಸಿರಿಲ್ಲದೆ ಬಲವಿಲ್ಲ

ಬಿಡಿ ಬಿಡಿ ರೂಢಿಯ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಗಂಡಸರಿಲ್ಲದೆ ಕುಲವಿಲ್ಲ

ಮೇಲ ಫಿಮೇಲ ಮೇಲ.. ಫಿಮೇಲ ಮೇಲ ಫಿಮೇಲ ...

ಅಸೂಯೆ ಹುಟ್ಟಿದ್ದು ನಿನ್ನಿಂದಲೇ ಅತಿಯಾಸೆ ಹುಟ್ಟಿದ್ದು ತಮ್ಮಿಂದಲೆ ಅನುಮಾನ ಹುಟ್ಟಿದ್ದು ತಮ್ಮಿಂದಲೆ ಅವಮಾನ ಹುಟ್ಟಿದ್ದು ನಿಮ್ಮಿಂದಲೆ ಪತಿ ಬದುಕಿರಲಿ ಅನ್ನೋರು ನಾವು ಅದು ನಿಮ್ಮ ಸ್ವಾರ್ಥ ಅಲ್ಲ ಪರಮಾರ್ಥ ಸತಿ ಆದಿಶಕ್ತಿ ಅನ್ನೋರು ನಾವು ಅದೆ ಸ್ತ್ರೀಗರ್ಥ ಇಲ್ಲ ಪುರುಷಾರ್ಥ

ಆದಿ ಮೊದಲಾ ಅನಾದಿ ಮೊದಲಾ ನಾರು ಮೊದಲಾ ಎಳನೀರು ಮೊದಲಾ ಬಿಡಿ ಬಿಡಿ ಸಂತರ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಹೆಂಗಸಿರಲ್ಲದೆ ಕಥೆಯಿಲ್ಲ ಬಿಡಿ ಬಿಡಿ ಬಿಂಕದ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಗಂಡಸರಿಲ್ಲದೆ ಜೊತೆಯಿಲ್ಲ

ಮೇಲ ಫಿಮೇಲ ಮೇಲ ಫಿಮೇಲ ಮೇಲ ಫಿಮೇಲ ...

ನಾರಿ ಛಲಕ್ಕೆ ಸಾಟಿ ಉಂಟೆ ಬೀರನ ಬಲಕ್ಕೆ ಕೋಟಿ ಉಂಟೆ ತಾಯಿ ದೈವಕ್ಕೆ ಸಮನಾರು ಗುರು ದೈವಕ್ಕೆ ಸರಿಯಾರು ಪತಿಪ್ರಾಣವನೆ ತಂದೋರು ನಾವು ಅಲ್ಲಿ ತರುತ್ತೀರಿ ಇಲ್ಲಿ ತೆಗೆಯುತ್ತೀರಿ ಸತಿ ಮಾನವನೆ ಕಾಯೋರು ನಾವು ಅಲ್ಲಿ ಕಾಯುತ್ತೀರಿ ಇಲ್ಲಿ ಹೂಳುತ್ತೀರಿ

ಸೀತೆ ಸರಿಯೇ ರಾಮ ಸರಿಯೇ ನಾವು ಸರಿಯೇ ನೀವು ಸರಿಯೇ ಬಿಡಿ ಬಿಡಿ ಹರಿಕಥೆ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಹೆಂಗಸಿರಲ್ಲದೆ ದಯವಿಲ್ಲ ಬಿಡಿ ಬಿಡಿ ಜಂಭದ ಮಾತೆಲ್ಲ ನಾವೆ ಇಲ್ಲದೆ ನೀವಿಲ್ಲ ಗಂಡಸರಿಲ್ಲದೆ ಜಯವಿಲ್ಲ

ಮೇಲ ಫಿಮೇಲ ಮೇಲ· · ಫಿಮೇಲ.. ಮೇಲ ಫಿಮೇಲ