ಅಪ್ಲೋಡ್:ರವಿ ಎಸ್ ಜೋಗ್ (13 08 2018)
(S1) ನಲ್ಲ ಎನ್ನಲೆ ನಿನ್ನ....
ಇನಿಯ ಎಂದು ಕೂ...ಗಲೆ ನಿನ್ನ
ನನ್ನೆದೆಯಾಳದಲಿ....
ನೆಲೆಸಿರುವ ದೇವನೆ ನಿನ್ನ.....
ಏನೆಂದು ಕರೆಯಲಿ...
ಏನೆಂದು ಬರೆಯಲಿ...
ಗೆಳೆಯ....ಪ್ರಿಯ ಗೆಳೆಯ.....
Music
(S1) ಒಲವಿನ ಗೆಳೆಯನೆ ನಿನಗೆ
ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ
ಕೈ ಮುಗಿವೆ ನಾ ಬರೆವೆ...
Music
(S2) ನಿನ್ನ ಮನಸು ಬಲ್ಲೆನು ನಾನು
ನಿನ್ನಾಸೆ ಬಲ್ಲೆನು ನಾನು
ಹೂವಂತ ಹೃದಯವು ನಿನ್ನದು
ಜೇನಂತ ನುಡಿಗಳು ನಿನ್ನದು
(S1) ನಿನ್ನ ನೆರಳಿನಾಸರೆಯಲ್ಲಿ
ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು
ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು
ಕೊನೆಗೇನು ಕಾಣೆನು.....
ಒಲವಿನ ಗೆಳೆಯನೆ ನಿನಗೆ
ಕೈ ಮುಗಿವೆ ನಾ ಬರೆವೆ...
Music
(S2) ನೀ ನಡೆವ ಹಾದಿಯೆ ಬೇರೆ
ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು
ಗತಿಒಂದೆ ಸಂಕಟ ನೋವು
(S1) ನನ್ನ ಮನದ ಮಾತುಗಳನ್ನು
ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು
ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು
ನಾ ದೂರವಾದರು
ಒಲವಿನ ಗೆಳೆಯನೆ ನೀನೆ
ನನ್ನ ಜೀವ ನನ್ನ ದೈವ
ನಿನ್ನ ಸುಖವೆ ನನ್ನ ಸುಖವು
ನಿನಗೆಂದು ಶುಭ ಕೋರುವೆ
ಒಲವಿನ ಗೆಳೆಯನೆ ನೀನೆ
ನನ್ನ ಜೀವ ನನ್ನ ದೈವ
ನನ್ನ ಜೀ...ವ ನನ್ನ ದೈ...ವ
(S) ರವಿ ಎಸ್ ಜೋಗ್ (S)