menu-iconlogo
logo

Doorada Oorinda Hammera Banda

logo
Liedtext
LYRICS COURTESY "ಮೌನ"

........

F: ದೂರದ ಊರಿಂದ ಹಮ್ಮೀರ ಬಂದ

ಜರತಾರಿ ಸೀರೆ ತಂದ

ಅದರಲ್ಲೇ ಇಟ್ಟೇನೇ ಈ ನನ್ನ ಮನಸನ್ನ

ಜೋಪಾನ ಜಾಣೆ ಎಂದ

ಉಟ್ಟಾಗ ನನಗಂತೂ

ಮೈಯೆಲ್ಲಾ ಝಂ ಅಂತು

ಆ ಒಂದು ಕ್ಷಣ,ನನ್ನ ಮನ,

ಎಲ್ಲೊ ತೇಲೋಯ್ತು

M: ನೀ ಮುಡಿದ ಮಲ್ಲಿಗೆ ಹೂವಿನ ಗಂಧ

ಕರೆತಂತು ಊರಿಂದ

ಕಣ್ತುಂಬ ನೋಡ್ದಾಗ ಈ ನಿನ್ನ ಅಂದ

ಶುರುವಾಯ್ತು ಹೊಸ ಬಂಧ

ಎದೆ ತಾಳ ತಪ್ಪೋಯ್ತು

ನನಗೆಲ್ಲಾ ಮರೆತೊಯ್ತು

ಆ ಒಂದು ಕ್ಷಣ ನನ್ನ ಮನ

ಎಲ್ಲೋ ತೇಲೋಯ್ತು

ಲ ಲ ಲ ಲ

ಲ ಲ ಲ ಲ

ಲ ಲ ಲ ಲ

ಲ ಲಾ ಲ ಲ

Music

M: ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ

ಎಲ್ಲೆಲ್ಲೂ ಅರಳಾವೆ ಹೂವೆ

ಮಿಂಚಂತೆ ನಗುವಂತೆ ಗೊತ್ತು

ಮಳೆ ಹಂಗೆ ಸುರಿದಾವೆ ಮುತ್ತು

F: ಈ ಮಾತಿನ ಬಲೆಯನು ನೀ ಬೀಸಿದೆ

ಈ ಮೀನಿದು ಅದರಲ್ಲಿ ವಶವಾಗಿದೆ

M: ತುಟಿ ಇದು ಸೊಗಸು

ಇದರ ರುಚಿ ಇನ್ನು ಸೊಗಸು..

ರುಚಿಯೇ ಸಿಗದೇ ಇನ್ನು ಬಯಸಿದೆ ಮನಸು..

F: ಹಸಿವು ನಿದ್ದೆ ಹಾಳಾಗೋಯ್ತು ಎಲ್ಲ ನಿನ್ನಿಂದ

M: ನೀ ಮುಡಿದ ಮಲ್ಲಿಗೆ ಹೂವಿನ ಗಂಧ

ಕರೆತಂತು ಊರಿಂದ

ಕಣ್ತುಂಬ ನೋಡ್ದಾಗ ಈ ನಿನ್ನ ಅಂದ

ಶುರುವಾಯ್ತು ಹೊಸ ಬಂಧ

ಎದೆ ತಾಳ ತಪ್ಪೋಯ್ತು ,ನನಗೆಲ್ಲಾ ಮರೆತೊಯ್ತು

ಆ ಒಂದು ಕ್ಷಣ ನನ್ನ ಮನ ಎಲ್ಲೋ ತೇಲೋಯ್ತು..

Music

F: ಮುಂಜಾನೆ ಕನಸಿನ ವೇಳೆ

ನೀ ಬಂದೆ ಅಂಬಾರಿ ಮೇಲೆ

ನಂಗಾಗಿ ನೀ ಆಗ ತಂದೆ

ಸುಗಂಧ ರಾಜನ ಮಾಲೆ

M: ಆ ತಾವರೆ ಚೆಲುವೆಯ ಕಣ್ಣಾಯಿತೋ.

ಆ ಮೊಡವೆ ಕಂಗಳ ಕಪ್ಪಾಯಿತೋ...

F: ಉಸಿರಿದು ಭಾರ ನೀನು ಹೋದರೆ ದೂರ

ಆಸರೆಯಾಗಿ ತೋಳ ಸೆರೆ ಹಿಡಿ ಬಾರಾ

M: ನೀನೆ ನನ್ನ ಪ್ರಾಣ ಇನ್ನ ಕೇಳೇ ನನ ಚಿನ್ನ..

F: ದೂರದ ಊರಿಂದ ಹಮ್ಮೀರ ಬಂದ

ಜರತಾರಿ ಸೀರೆ ತಂದ

M: ಹಾ ಹಾ ಹಾ

F: ಅದರಲ್ಲೇ ಇಟ್ಟೇನೇ ಈ ನನ್ನ ಮನಸನ್ನ

ಜೋಪಾನ ಜಾಣೆ ಎಂದ

M: ಹೆ ಹೆ ಹೆ

F: ಉಟ್ಟಾಗ ನನಗಂತೂ

ಮೈಯೆಲ್ಲಾ ಝಂ ಅಂತು

ಆ ಒಂದು ಕ್ಷಣ ನನ್ನ ಮನ

ಎಲ್ಲೊ ತೇಲೋಯ್ತು

M: ನೀ ಮುಡಿದ ಮಲ್ಲಿಗೆ ಹೂವಿನ ಗಂಧ

ಕರೆತಂತು ಊರಿಂದ

ಕಣ್ತುಂಬ ನೋಡ್ದಾಗ ಈ ನಿನ್ನ ಅಂದ

ಶುರುವಾಯ್ತು ಹೊಸ ಬಂಧ

ಎದೆ ತಾಳ ತಪ್ಪೋಯ್ತು

ನನಗೆಲ್ಲಾ ಮರೆತೊಯ್ತು

ಆ ಒಂದು ಕ್ಷಣ ನನ್ನ ಮನ

ಎಲ್ಲೊ ತೇಲೋಯ್ತು

Doorada Oorinda Hammera Banda von S. P. Balasubrahmanyam/S Janaki - Songtext & Covers