ಭೂಮಿ ಮೇಲಿರೋ ವಿಶೇಷ ನೀನೇನೇ ನಂಗೆ
ನಾನೇ ಆದರೆ ಪರಮೇಶ ನೀ ಜೊತೆಗಿರುವ ಗಂಗೆ
ನೀನೊಂತರ ಮುದ್ದು ಮಾಯಾವಿ . ಓ .ಓ .ಓ .ಓ
ನಾನಾದೆ ನಿಂಗೆ ಅಭಿಮಾನಿ.....
ಈಗೆ ನನ ಮುಂದೆ ಹೋದರೆ
ನಾನು ಅಲೆಮಾರಿಯಾಗುವೆ..
ಕಾಮನಬಿಲ್ಲಿಗೂ ನಾಚಿಕೆ
ಮಾಡಿ ಮುಂಗುರುಳ ಹೋಲಿಕೆ..
ಬಂದಳೊಬ್ಬಳಂದಗಾತಿ ನನ್ನ ಜೀವಕೆ...
ಭೂಮಿ ಮೇಲಿರೋ ವಿಶೇಷ ನೀನೇನೇ ನಂಗೆ..
ನಾನೇ ಆದರೆ ಪರಮೇಶ ನೀ ಜೊತೆಗಿರುವ ಗಂಗೆ..
ಓ .ಓ . ಸಾಟಿ ಇಲ್ಲದ ರೂಪ ಗಣಿಯೆ ನಿನ್ನದು
ಆ ರೂಪವ ಹೊಗಳಲು ಪದಗಳು ಎಲ್ಲಿವೆ?
ನಿನ್ನ ನೋಡುವ ಕೆಲಸ ನನ್ನ ಕಣ್ಣಿಗೆ
ಆ ಕಣ್ಣಿಗೂ ಬೇಸರ ಮಾಡಬೇಡವೇ..
ಪದವಿರದ ಹಾಡಿಗೆ ಪದವಿಂದು ಸಿಕ್ಕಿದೇ
ಮೌನದ ರಾಗ ಇನ್ನು ಪ್ರೀತಿಯ ಹಾಡೇನೇ..
ಏನೋ ಹೊಸದೊಂದು ಲೋಕಕೆ
ನಾನೆ ಹೋದಂತೆ ನಂಬಿಕೆ ..
ಪ್ರೀತಿ ಶುರುವಾಗೋ ಸಂಚಿಕೆ
ಮುಗಿಯದು ನನ ಪ್ರೀತಿ ಅರ್ಧಕೇ ...
ನನ್ನ ರಾಣಿ ನೀನು ಮನಸ್ಸಲ್ಲಿಟ್ಟು
ನಿನ್ನ ಕಾಯುವೆ..
ಭೂಮಿ ಮೇಲಿರೋ ವಿಶೇಷ ನೀನೇನೇ ನಂಗೆ.
ನೀನು ಆದರೆ ಪರಮೇಶ ನಾ ಆಗುವೆ ನಿನ ಗಂಗೆ .
ಓ ..ಓ .. ಅಂತರಂಗವೇ ನಿನ್ನ ಒಪ್ಪಿಕೊಂಡಿದೆ
ನಾ ಒಪ್ಪದೇ ಹೋದರೆ ಮೋಸ ನನಗೇನೇ..
ಪ್ರೇಮಲೋಕಕೆ ಧೀರ ರಾಜನು ನೀನೆ
ಈ ಜೀವಕೆ ಆಸರೆ ನಿನ್ನ ಮಡಿಲೇನೆ ..
ತಲೆಕೆಡಿಸುವ ಪ್ರೀತಿಗೆ ಮನ ಮಿಡಿದಿದೆ ಈ ಕ್ಷಣ
ಅಂಗೈಯಲಿ ಹಿಡಿದು ಹೇಳುವೆ ನನ್ನ ಪ್ರಾಣ ನೀನೆ..
ನೀನು ಅಲೆಮಾರಿಯಾದರೆ
ನಾನೆ ನಿನ್ನ ದಾರಿಯಾಗುವೆ..
ಪ್ರೀತಿ ಶುರುವಾದ ಸಂಚಿಕೆ
ಮುಗಿದರೆ ಕೊನೆಯು ಈ ಜೀವಕೆ...
ನಾ ಮತ್ತೆ ಮತ್ತೆ ಹುಟ್ಟಿಬಂದು
ನಿನ್ನೆ ಸೇರುವೆ..
ಭೂಮಿ ಮೇಲಿರೋ ವಿಶೇಷ ನೀನೇನೇ ನಂಗೆ..
ನಾನೇ ಆದರೆ ಪರಮೇಶ ನೀ ಜೊತೆಗಿರುವ ಗಂಗೆ..