ಮಾದೇವ ಮಾದೇವ ಮಾದೇವ ಮಾದೇವ...
ಮಾದೇವ ಮಾದೇವ ಮಾದೇವ ಮಾದೇವ..ಆ.....
ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡ್ಯ ಮ್ಯಾಲೆ ದುಂಡು ಮಲ್ಲಿಗೆ.....
ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡ್ಯ ಮ್ಯಾಲೆ ದುಂಡು ಮಲ್ಲಿಗೆ.....
ಅಂದಾವರೆ ಮುಂ..ದಾವರೇ ಮತ್ತೆ ತಾವರೆ ಪುಷ್ಪ
ಛಂದಕ್ಕಿ ಮಾಲೆ ಬಿಲ್ಪತ್ರೆ.... ಮಾದವೇ ನಿಮ್ಗೆ
ಛಂದಕ್ಕಿ.. ಮಾ...ಲೆ ಬಿಲ್ಪತ್ರೆ.. ತುಳಸಿ ದಳವಾ
ಮಾದಪ್ನಾ ಪೂ...ಜೆಗೆ ಬಂದು... ಮಾದೇವ ನಿಮ್ಮಾ
ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡ್ಯ ಮ್ಯಾಲೆ ದುಂಡು ಮಲ್ಲಿಗೆ....
ತಪ್ಪಾಳೆ ಬೆಳಗಿವ್ನಿ... ತುಪ್ಪವ ಕಾಸಿವ್ನಿ...
ಕಿತ್ತಾಳೆ ಹಣ್ಣು ತಂದೀವ್ನಿ...ಮಾದೇವ ನಿಮ್ಗೆ..
ಕಿತ್ತಾಳೆ ಹ...ಣ್ಣಾ ತಂದೀವ್ನಿ.. ಮಾದಪ್ಪಾ
ಕಿತ್ತಾ..ಡಿ.. ಬರುವ ಪರಷಗೆ....ಮಾದೇವ ನಿಮ್ಮ
ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡ್ಯ ಮ್ಯಾಲೆ ದುಂಡು ಮಲ್ಲಿಗೆ....