ಅಮ್ಮಾ........................ಅಮ್ಮ
.
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಕಯ್ಯ ನೀನು ಚಾಚಬೇಡ
ಎನ್ನ ಹಿಂದೆ ಬರಬೇಡ
ಎಂದಿನಂತೆ ಬಯ್ಯಬೇಡ
ಹೇಡಿ ಅನ್ನಬೇಡ
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ........................ಅಮ್ಮ
.
ಚಿತ್ರ - ಬೀದಿ ಬಸವಣ್ಣ
ಗಾಯಕ - ಡಾ||ಪಿ.ಬಿ.ಶ್ರೀನಿವಾಸ್
.
ಹ ಹ ಹಾ ಆಸೆಯ ಅಲ್ಲೇ ಅದಿಮಿಟ್ಟು
ದೂರದಿ ನಿಲ್ಲೇ ದಯವಿಟ್ಟು
.
ಆಸೆಯ ಅಲ್ಲೇ ಅದಿಮಿಟ್ಟು
ದೂರದಿ ನಿಲ್ಲೇ ದಯವಿಟ್ಟು
ಕಬ್ಬಿನ ಜಲ್ಲೆ ಬಲು ಸೊಟ್ಟು
ಸಿಹಿಯೇ ಅದರಾ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ........................ಅಮ್ಮ
.
ಸಂಗೀತ - ಟಿ.ಜಿ.ಲಿಂಗಪ್ಪ
ಸಾಹಿತ್ಯ - ವಿಜಯನಾರಸಿಂಹ
ಸಮರ್ಪಣೆ - ಪಿ.ಆರ್.ನಂದನ್ ಭಟ್
.
ಎನ್ನಯ ತಾಯಿ ಕೈತುತ್ತು..
ಎಲ್ಲಾ ದೇವರ ತಾಕತ್ತೂ
.
ಎನ್ನಯ ತಾಯಿ ಕೈತುತ್ತು..
ಎಲ್ಲಾ ದೇವರ ತಾಕತ್ತೂ
ಗೆದ್ದಿತು ಆಟದೆ ಈವತ್ತು
ಕೊಳ್ಳಮ್ಮಾ ನಿನ ಸಂಪತ್ತು
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ........................ಅಮ್ಮ
.