menu-iconlogo
huatong
huatong
avatar

Chinnamma Chinnamma

Kailash Kher/Indu Nagarajhuatong
rodriguezajrodhuatong
Lyrics
Recordings
(ಗಂ) ನೋಡುತ್ತಾ ನೋಡುತ್ತಾ ನಾನಂತು ಅಂಗಾತ

ಬಿದ್ದೋದೆ ನೋಡೇ ಚಿನ್ನಮ್ಮ ..

(ಗಂ) ಏನಂತ ಏನಂತ ಭೂಮಿಲಿ ನಂಗಂತ

ಹುಟ್ಟ್ಬುಟ್ಟೆ ನೀನು ಚಿನ್ನಮ್ಮಾ...

(ಗಂ) ಬೆಳದಿಂಗ್ಳ ಬಿಂದ್ಗೆಲಿ ಹಿಡ್ಕೊಂಬಿಟ್ಟು..

ಕುಡ್ಕೊಂಡು ಬೆಳ್ದೆನಮ್ಮ..

ನೀನಿಟ್ಟ ಹಣೆ ಬಟ್ಟು ಮ್ಯಾಲೆ ಹನಿ

ನಕ್ಷತ್ರ ಆಗ್ತಾವಮ್ಮ..

ಚಿನ್ನಮ್ಮ... ಚಿನ್ನಮ್ಮ...

ನೀ ನನ್ನ ಮುದ್ದು ಗುಮ್ಮ.. ಆ ಆ...

ಹೂವಿನ ಸಂತೆಗೆ ಹೋಗ್ಬ್ಯಾಡಮ್ಮ..

ಹೂವೆಲ್ಲಾ ಅಳ್ತಾವಮ್ಮ...

ಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟು

ನಿನ್ನನ್ನೇ ನೋಡ್ತಾ..ರಮ್ಮ...

ಮ್ಯೂಸಿಕ್ : ಅರ್ಜುನ್ ಜನ್ಯ

ಸಾಹಿತ್ಯ : ಕವಿರಾಜ್

ಗಾಯಕ : ಕೈಲಾಶ್ ಕೇರ್, ಇಂದು ನಾಗರಾಜ್.

ಕೃಪೆ: ಆನಂದ ಆಡಿಯೋ

ಅಪ್ಲೋಡ್ : ಚೇತನ್ ಶೆಟ್ಟಿ , ಬಸು ತುಮಕೂರು , ಅಶ್ವಿನಿ ಬೀದರ್.

(ಗಂ) ಸೊಂಟ ಕಬ್ಬಿನ್ ಜಲ್ಲೆ ಹಂಗೆ.

ಕಂಠ ಕೋಗಿಲೆ ಕುಹೂ ಅಂದಂಗೆ.

ಭಂಟ ನಾನೇ ಇನ್ನೂ ನಿಂಗೆ..ಚಿನ್ನಮ್ಮ...

(ಹೆ) ಹೇ...ಏ ಊರ ಕೇರಿ ದಂಡೆ ಮ್ಯಾಗೆ

ಸಿಕ್ಕಿಬಿಟ್ರೆ ನಿನ್ನ ಕೈಗೆ..

ನನ್ನ ಜೀವ ಉಳಿಯೋದ್ ಹೆಂಗೇ ಚನ್ನಯ್ಯ..

(ಗಂ) ನೀನಿಟ್ಟ ಹಣೆ ಬಟ್ಟು ಮ್ಯಾಲೆ ಹೋಗಿ

ನಕ್ಷತ್ರ ಆಗ್ತಾವಮ್ಮ.

(ಹೆ) ನೀ ಕೊಟ್ಟ ಮುತ್ತೆಲ್ಲಾ ಜೀವ ಬಂದು

ಚಿಟ್ಯಾಗಿ ಹಾರ್ತಾವಯ್ಯ..

(ಗಂ) ಚಿನ್ನಮ್ಮ... ಚಿನ್ನಮ್ಮ...

ನೀ ನನ್ನ ಮುದ್ದು ಗುಮ್ಮ.... ಆ ಆ

ನೋಡುತ್ತಾ ನೋಡುತ್ತಾ ನಾನಂತು ಅಂಗಾತ

ಬಿದ್ದೋದೆ ನೋಡೆ ಚಿನ್ನಮ್ಮ..

(ಗಂ) ಹತ್ತಿ ಜೊತೆ ಹಸೆ ಮಣಿ

ಕಟ್ಟುತ್ತಿನಿ ಹೊಸ ಮನಿ

ಮಕ್ಳು ಮರಿ ಮಾಡೋಣ್ವೇನೆ..ಚಿನ್ನಮ್ಮ...ಆಆ. . .

(ಹೆ) ನಿನ್ನ ಹೆಸ್ರ ಬರ್ದ ಹಣೆ...

ನಿನ್ನ ತೋಳೆ ನನ್ನ ಮನೆ

ಏನೇ ಆದ್ರೂ ನೀನೇ ಹೋಣೆ...ಚೆನ್ನಯ್ಯ..

(ಗಂ) ಮೂರ್ ಹೊತ್ತು ಮುದ್ದಾಗಿ ಪಪ್ಪಿ ಕೊಟ್ಟು...

ಮುದ್ದಾಗಿ ಸಾಕ್ತಿನಮ್ಮ...ಅ .. .

(ಹೆ) ಮತ್ ಮತ್ತೆ ನಿನ್ನಾಣೆ ಹೊಸ್ ಹೋಸ್ ದಾಗಿ

ಲವ್ವಲ್ಲಿ ಬೀಳ್ತಿನಯ್ಯ..ಅ ಅ

(ಗಂ) ಚಿನ್ನಮ...ಚಿನ್ನಮ್ಮ...

ನೀ ನನ್ನ ಮುದ್ದು ಗುಮ್ಮ...

ನೋಡುತ್ತಾ ನೋಡುತ್ತಾ ನಾನಂತು ಅಂಗಾತ

ಬಿದ್ದೋದೆ ನೋಡೆ ಚಿನ್ನಮ್ಮ...

More From Kailash Kher/Indu Nagaraj

See alllogo