ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ ಬಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮ್ರುಷ್ಟಾನ್ನವಯ್ತು, ಬೈಗಳೇ ಮೈಗೂಡಿ ಹೋಯ್ತು ಈ ಮನಸೇ ಕಲ್ಲಾಗಿ ಹೋಯ್ತು
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಅಣ್ಣನು ತಮ್ಮನು ಇಲ್ಲ
ಮಂಜುನಾಥ್ ಯಾದವ್
ಬೀದಿಗೆ ಒಂದು, ನಾಯಿ ಕಾವಲಂತೆ,ನಾಯಿಗೂ ಒಂದು ರೊಟ್ಟಿ ಮೀಸಲಂತೆನಾಯಿಗೂ ಹೀನವಾದೆನ??
ಮಾಳಿಗೆಗೆ ಒಂದು,ಬೆಕ್ಕು ಕಾವಲಂತೆ, ಬೆಕ್ಕಿಗೂ ನಿತ್ಯ, ಹಾಲು ತುಪ್ಪವಂತೆ ಬೆಕ್ಕಿಗಿಂತ ಕೆಟ್ಟ ಶಕುನಾನ??
ತಿಂದೊರು ಎಲೆಯ ಬಿಸಾಡೋ ಹಾಗೆ, ಹೆತ್ತೋಳು ನನ್ನ ಎಸೆದಾಯ್ತು.
ಸತ್ತೋರ ಎಡೆಯ ಕಾಗೆಗೆ ಇರಿಸಿ, ಹೆತ್ತೋರ ಕೂಗಿ ಕರೆದಾಯ್ತು,
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ, ಅಣ್ಣನು ತಮ್ಮನು ಇಲ್ಲ
ಮಂಜುನಾಥ್ ಯಾದವ್
ಹುಟ್ಟೋ ಮಕ್ಕಳೆಲ್ಲ ತುಗೋ ತೊಟ್ಟಿಲಲ್ಲಿ, ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ ನಾನು ಏನು ಪಾಪ ಮಾಡಿದೆ ?
ಅರ್ಧ ರಾತ್ರಿಯಲ್ಲಿ, ಅರ್ಧ ನಿದ್ದೆಯಲ್ಲಿ, ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ ಕೊಟ್ಯನು ಕೋಟಿ ಕೂಗು ಇದೆ,
ಗ್ರಹಚಾರ ಬರಿಯೋ ಓ ಬ್ರಹ್ಮ ನಿನಗೆ, ಎಂದೆಂದೂ ಅವರ ಶಾಪವಿದೆ
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ, ಅಣ್ಣನು ತಮ್ಮನು ಇಲ್ಲ
ಬಿಕಾರಿ ದೊರೆಯಾದೆ ನಾನು, ಅತ್ತರೆ ಮುದ್ದಿಸೋರಿಲ್ಲ, ಸತ್ತರೆ ಹೊದ್ದಿಸೋರಿಲ್ಲ.
ಎಂಜಲೇ ಮ್ರುಷ್ಟಾನ್ನವಯ್ತು, ಬೈಗಳೇ ಮೈಗೂಡಿ ಹೋಯ್ತು, ಈ ಮನಸೇ ಕಲ್ಲಾಗಿ ಹೋಯ್ತು..??