ಶ್ರೀ ಕೃಷ್ಣ
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕ್ಕಿಂತ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಉರುಳೊ ದನಿ ತರವೆ...
ನಗಬಾರದೆ ನಗಬಾರದೆ ನನ್ನೊಲವೆ...
ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನು
Music
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು?
ಏನಾಗಲೀ ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನಾ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನಾ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ
ಮಳೆಯಾ ಹನಿ ಉರುಳೊ ದನಿ ತರವೆ...
ನಗಬಾರದೆ ನಗಬಾರದೆ ನನ್ನೊಲವೆ...
ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನು
Music
ತಂಗಾಳಿ ಆಗು ಬಿರುಗಾಳಿ ಆಗು
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ ಅಳುವೇ ಬರುತಿದೆ
ನಿನ್ನ ನಗುವಿಲ್ಲದೆ ಜಗ ನಿಂತಂತಿದೆ
ನಿದಿರೆ ಬರದ ಕಣ್ಗೆ ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ
ಉಸಿರಾಡುವ ಶವವಾದೆ ನಾ ನೀನು ಇಲ್ಲದೆ
ಮಳೆ ನಿಂತರೂ ಮರದ ಹನಿ ತರವೇ...
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ...
ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನು