ದೂರ ದೂರ ದೇಹವಿದ್ದರೇನು
ಜೀವ ಜೀವ ಒಂದೇ ಅಲ್ಲವೇನು
ಸ್ವಲ್ಪ ದಿವಸ ದೂರ ಇದ್ದರೇನು
ಕಣ್ಣ ಮುಚ್ಚಿ ನೆನೆದರಾಗದೇನು
ಜ್ವರ
ಇದೊಂದು ಜ್ವರ
ಪ್ರೀತಿಯಲ್ಲಿ ವಿರಹ ಒಂದು
ಪ್ರೀತಿಯಲ್ಲಿ ವಿರಹ ಒಂದು
ಬಂದು ಹೋಗೋ ಒಂದು ಸಣ್ಣ ಜ್ವರ
ಒಂಥರಾ ಜ್ವರ
ತಾನು ಪ್ರೀತಿ ಮಾಡುವಾಗ ಮಾಡಿ
ನಮಗೆ ಬೇಡ ಅನ್ನೋ ಲೋಕ ನೋಡಿ
ಅವರ ತಪ್ಪು ಹೆಳಲೇಬೇಕು ಹಾಡಿ
ಪ್ರೀತಿ ತಾನೇ ನಮಗೆ ಜೀವನಾಡಿ
ತಪ್ಪಾ?
ಹೇಳೋದು ತಪ್ಪಾ?
ಪ್ರೀತಿಯಲ್ಲಿ ನಾವು ಎಷ್ಟು
ಪ್ರೀತಿಯಲ್ಲಿ ನಾವು ಎಷ್ಟು
ಗಟ್ಟಿ ಅಂತ ತೋರಿಸೋದೆ ತಪ್ಪಾ?
ಪ್ರೀತ್ಸೋದ್ ತಪ್ಪಾ?