ಚಿತ್ರ ಅವಳ ಹೆಜ್ಜೆ
ಹಾಡು ಬಂದಯಾ ಬಾಳಿನ ಬೆಳಕಾಗಿ
ಗಾಯಕರು ಎಸ್ ಪಿ ಬಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ
ಗಾನ ಸಂಗಮ ಕುಟುಂಬದ ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
ಗಂಡು : ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ
ಗಂಡು : ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳೀ ನಗುವ ಹಾಗೆ,
ಈ ಮೊಗವೇಕೋ ಕಾಣೆ,ಹೂವಾಯಿತೀಗ
ಹೆಣ್ಣು : ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ, ಹೊಸ ಜೀವ ತಂದಿತು
ಗಂಡು : ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು,ಕಾಣೆನು ಪ್ರೇಯಸಿ ನಾನು
ಹೆಣ್ಣು : ಬಂದೆಯಾ ಬಾಳಿನ ಬೆಳಕಾಗಿ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ
ಗಂಡು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಗಂಡು : ಬಂದೆಯಾ ಬಾಳಿನ ಬೆಳಕಾಗಿ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ಆಸರೆ ಏನೊಂದು ಕಾಣದೆ ನಾ ನೊಂದು
ಅಂದು ಓಡಿ ಬಂದೆ
ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಗಂಡು : ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೆಣ್ಣು : ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ,ಈ ಸವಿ ಮಾತನು ಕೇಳಿ....
ಗಂಡು : ಬಂದೆಯಾ ಬಾಳಿನ ಬೆಳಕಾಗಿ
ಹೆಣ್ಣು : ಬಂದೆಯಾ ಪ್ರೇಮದ ಸಿರಿಯಾಗಿ
ಗಂಡು : ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ನನಗಾಗಿ ನನ್ನ ಜೊತೆಯಾಗಿ
ಇಬ್ಬರು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ಲಲಲಾ ಲಲಲಲಲಾ,ಲಲಲಾ, ಆ ಆ ಆ ಆ