ಜೈ ಗಣೇಶ ನಿನಗೆ ವಂದನೆ
ಸುಪ್ರಭಾತ ನಿನಗೆ ಹೃದಯದಾರ್ಚನೆ
ದಿವ್ಯ ದಿವ್ಯ ಮೂರುತಿ
ನಮ್ಮ ಭವ್ಯ ಬಾಲ ಸಾರಥಿ
ಅಗ್ರಪೂಜೆಗಾಧಿಪತಿ
ಸಂಕಷ್ಟಹರ ಗಣಪತಿ
ಗೌರಿ ಪುತ್ರ ನಿನಗೆ ವಂದನೆ
ವರದ ಹಸ್ತ ನಿನಗೆ ಹೃದಯದರ್ಪಣೆ
ಸಿದ್ಧಿ ಬುದ್ಧಿ ಶ್ರೀಪತಿ
ಸಕಲ ಶಾಸ್ತ್ರ ವಿದ್ಯಾ ಕುಲಪತಿ
ಆದಿ ಪೂಜೆಗಾದಿಪತಿ
ಸಂಕಷ್ಟಹರ ಗಣಪತಿ
ಈಶ ಪುತ್ರ ನಿನಗೆ ವಂದನೆ
ಸತ್ಯ ನಿಷ್ಠಾ ನಿನಗೆ ಸುಪ್ರದಕ್ಷಿಣೆ
ಜಯ ಜಯ ಜಗಜ್ಯೋತಿ
ಸಪ್ತ ಲೋಕ ಕೀರುತಿ
ಪ್ರಥಮ ಪೂಜಾಗಾಧಿಪತಿ
ಸಂಕಷ್ಟ ಹರ ಗಣಪತಿ
ಗಜಾನನ ನಿನಗೆ ವಂದನೆ
ಸರ್ವ ಶಕ್ತ ನಿನಗೆ ಮೋದಕಾರ್ಪಣೆ
ಮಂಗಳಾಂಗ ಮೂರುತಿ
ಪ್ರಾಣ ವಾಯು ನಿನ್ನ ಕೀರುತಿ
ಮಹಾ ಕಾಯ ಭೂಪತಿ
ಸಂಕಷ್ಟ ಹರ ಗಣಪತಿ
ಏಕದಂತ ನಿನಗೆ ವಂದನೆ
ವಕ್ರತುಂಡ ನಿನಗೆ ಪುಷ್ಪದರ್ಪಣೆ
ವ್ಯಾಸರಾಯ ವಂದಿತ
ವೇದ ವೇದ ವಾಗ್ಪತಿ
ಮಹಾ ಕಾವ್ಯ ವಿರಚಿತ
ಸಂಕಷ್ಟ ಹರ ಗಣಪತಿ
ವಿಘ್ನರಾಜ ನಿನಗೆ ವಂದನೆ
ನಿತ್ಯ ವಿಜಯಿ ನಿನಗೆ ಗಂಧದರ್ಪಣೆ
ಮಹಾಕರ್ಣ ನಿನಗೆ ವಂದನೆ
ಕಾಲ ಜ್ಞಾನಿ ನಿನಗೆ ಮಂತ್ರದರ್ಪಣೆ
ರಾಮಚಂದ್ರ ಪೂಜಿತ
ಸಾಮಗಾನ ಸುಶ್ರುತಿ
ಸುರಗಣಾದಿ ವಂದಿತಾ
ಸಂಕಷ್ಟ ಹರ ಗಣಪತಿ
ಲಂಬೋದರ ನಿನಗೆ ವಂದನೆ
ತೆಂಗು ಬಾಲೆ ಬೆಲ್ಲ ನಿನಗೆ ಅರ್ಪನೆ
ತಂದೆ ತಾಯಿ ಇಬ್ಬರೆ
ಮೂರು ಲೋಕವೆಂದ ದೃತ್ಪತಿ
ಸುಬ್ರಹ್ಮಣ್ಯ ಅಗ್ರಜ
ಸಂಕಷ್ಟ ಹರ ಗಣಪತಿ
ಭಕ್ತ ಕವಚ ನಿನಗೆ ವಂದನೆ
ನಿನ್ನ ಕಿವಿಯಲಿರಲಿ ನಮ್ಮ ಪ್ರಾರ್ಥನೆ
ರಾಘವೇಂದ್ರ ಅರ್ಚಿತಾ
ಸುಪ್ರಸನ್ನ ಸತ್ಪತಿ
ಆರ್ತ ರಾತ್ಮ ಕಾಶ್ರಿತಾ
ಸಂಕಷ್ಟ ಹರ ಗಣಪತಿ
ಜ್ಞಾನವಂತ ನಿನಗೆ ವಂದನೆ
ಮಧುರ ಮಧುಪರ್ಕ ನಿನಗೆ ಅರ್ಪಣೆ
ಪಾಶಾ ಅಂಕುಶಧಾರಾ
ವಿಶ್ವ ರೂಪ ಸುಂದರಾಕೃತಿ
ಶುಭ್ರ ಪೀತಾಂಬರ
ಸಂಕಷ್ಟಹರ ಗಣಪತಿ
ಬ್ರಹ್ಮ ತೇಜ ನಿನಗೆ ವಂದನೆ
ಅಗ್ನಿ ಗರ್ಭ ಪುತ್ರ ಸ್ವಯಂ ಪೂರ್ಣನೇ
ಪಾಹಿ ತ್ರೈಗುಣೇಶ್ವರ
ಆನಂದ ಪ್ರೇಮ ಪ್ರಕೃತಿ
ಪಾಹಿ ಸಂತ ಕಿಂಕರಾ
ಸಂಕಷ್ಟ ಹರ ಗಣಪತಿ
ಸಚ್ಚಿದಾನಂದ ವಿಗ್ರಹ
ಮಾದೋ ಕಾ__ಮಾ ಕ್ರೋಧ ಲೋಭ ನಿಗ್ರಹಾ
ಶಾಂತಿ ಓಂ ಶಾಂತಿ ಓಂ ಗಣಪತಿ