ಓಹೋ ವಸಂತ, ಹೃದಯ ಅರಳೊ ಕಾಲ
ಓಹೋ ವಸಂತ, ಬಯಕೆ ಚಿಗುರೊ ಕಾಲ
ಭೃಂಗದ ಮೇಲೆ ಬಂದಳು ಬಾಲೆ
ಮಲ್ಲಿಗೆಯ ಹೂವಾಗಿ ಮೋಹಿಸುವ ಹೆಣ್ಣಾಗಿ
ಅಂದ ಅಂದದ ತೇರು ಬಂದ
ಜಂಬದ ಜೋರು ನೋಡಿ ವಸಂತ ಹಾಡಿದ
ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ
ಸೂಸಿ ಹಾಡಿ ಸ್ವಾಗತ ಹೇಳಿದ
ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
ಮಂದಾರ ಮದನಾರಿ ಸ್ವರ್ಗಾನೇ ತಂದಳಮ್ಮ
ಅಂದ ಅಂದದ ತೇರು ಬಂದ
ಜಂಬದ ಜೋರು ನೋಡಿ ವಸಂತ ಹಾಡಿದ
ಓಹೋ ವಸಂತ, ಕವನ ಕಡೆವ ಕಾಲ
ಓಹೋ ವಸಂತ, ಮದನ ಮದುವೆ ಕಾಲ
ಹೋಲಿಕೆಯಲ್ಲು, ಸುಂದರ ಸುಳ್ಳು
ಬಣ್ಣಿಸಿದ ಕವಿಯಾಗಿ, ಚುಂಬಿಸಿದ ಸವಿಯಾಗಿ
ಅಂದ ಅಂದದ ತೇರು ಬಂದ
ಜಂಬದ ಜೋರು ನೋಡಿ ವಸಂತ ಹಾಡಿದ
ಲಾಲಾಲ ... ಓಹೋಹೋ
ಓಹೋ ವಸಂತ, ಬಿಸಿಲು ಸವಿಯೊ ಕಾಲ
ಓಹೋ ವಸಂತ, ಹಸಿರು ನೆರೆಯೊ ಕಾಲ
ಬೆಚ್ಚನೆ ತೋಳು, ಹಚ್ಚನೆ ಬಾಳು ಸಂಧಿಸಿವೆ ಸುಖವಾಗಿ,
ಬಂಧಿಸಿವೆ ಪ್ರಿಯವಾಗಿ
ಅಂದ ಅಂದದ ತೇರು ಬಂದ
ಜಂಬದ ಜೋರು ನೋಡಿ ವಸಂತ ಹಾಡಿದ
ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ
ಹಾಡಿ ಸ್ವಾಗತ ಹೇಳಿದ
ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
ಮಂದಾರ ಮದನಾರಿ ಸ್ವರ್ಗಾನೇ ತಂದಳಮ್ಮ