ಸ್ನೇಹ-ಸಿಂಚನ ಕುಟುಂಬದ ಕೊಡುಗೆ
ಫ್ಯಾಮಿಲಿ ಐಡಿ
ಅಪ್ಲೋಡರ್ : ಸೇವಿತ್ ಕುಮಾರ್
M : ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ..
ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ..
ಈ ಸುಗ್ಗಿ ತಂದವಳಾರಮ್ಮ
F : ನಮ್ಮಮ್ಮ. ನಮ್ಮಮ್ಮ
M : ಈ ಹುಗ್ಗಿ ತಂದವಳಾರಮ್ಮ
F : ಭೂಮಿ ತಾಯಮ್ಮ
M : ಈ ಅಂಬಲಿ ತಂದವಳಾರಮ್ಮ
F : ನಮ್ಮಮ್ಮ. ನಮ್ಮಮ್ಮ
M : ಈ ಓಕುಳಿ ತಂದವಳಾರಮ್ಮ
F : ಭೂಮಿ ತಾಯಮ್ಮ
M : ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ...
Both : ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ
ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ
M : ಹೇಹೆ ಹೆಹೆ ಹೇ ಹೇಹೆ ಹೆಹೆ ಹೇ..
ಹೇಹೆ ಹೆಹೆ ಹೇ ಓ ಹೋ ಓಹೋ ಹೋ...
M : ಈ ಚಿನ್ನಮ್ಮ ನಮ್ಮಮ್ಮನಿಗೆ
F : ಮಗಳಮ್ಮ ಮಗಳಮ್ಮ
M : ಈ ಗಂಗಮ್ಮ ನಮ್ಮಮ್ಮನಿಗೆ
ಚೊಚ್ಚಲ ಮಗಳಮ್ಮ ಹೋ..ಕೆಚ್ಚಲ ಮಗಳಮ್ಮ
M : ಆ ಮಂಜಮ್ಮ ನಮ್ಮಮ್ಮನಿಗೆ
F : ತಂಗ್ಯಮ್ಮ ತಂಗ್ಯಮ್ಮ
M : ಈ ಗಾಯಮ್ಮ ನಮ್ಮಮ್ಮನಿಗೆ
ಹತ್ತಿರದವಳಮ್ಮ ಹೋ…ಬಿಟ್ಟಿರದವಳಮ್ಮ
ನಮ್ಮ ಅಮ್ಮಾನೂರಿನ ಬಳಗ ತುಂಬಾ ತುಂಬಾ ಕಿರಿದಮ್ಮ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮ
F : ಈ ಸುಗ್ಗಿ ತಂದವಳಾರಮ್ಮ
M : ನಮ್ಮಮ್ಮ. ನಮ್ಮಮ್ಮ
F : ಈ ಹುಗ್ಗಿ ತಂದವಳಾರಮ್ಮ
M : ಭೂಮಿ ತಾಯಮ್ಮ..
F : ಈ ಅಂಬಲಿ ತಂದವಳಾರಮ್ಮ
M : ನಮ್ಮಮ್ಮ. ನಮ್ಮಮ್ಮ
F : ಈ ಓಕುಳಿ ತಂದವಳಾರಮ್ಮ
M : ಭೂಮಿ ತಾಯಮ್ಮ..
F : ಒಂದು ನೆಲ್ಲು ಚೆಲ್ಲಿದರೆ
ರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ.
Both : ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ
F : ಓ.... ಓ... ಓ...ಓ...ಓ...ಓ...ಓ
ಓ.... ಓ... ಓ...ಓ...ಓ...ಓ...ಓ
M : ಈ ಕರಿಯ ನೇಗಿಲು ಕಟ್ಟಿದರು
F : ಅಚ್ಚಮ್ಮ ಮೆಚ್ಚಮ್ಮ
M : ಈ ಬಿಳಿಯ ಕಾಳು ಬಿತ್ತಿದರು
ಬೇಡ ಅನಲಮ್ಮ ಹೋ..ಬೇಧ ಇರದಮ್ಮ
ಈ ಕೆಂಚ ಗೊಬ್ಬರ ಹರವಿದರು
F : ಅಚ್ಚಮ್ಮ ಮೆಚ್ಚಮ್ಮ
M : ಈ ಎಡಚ ಕವಣೆ ಬೀರಿದರು
ಪಾಪ ಅನಲಮ್ಮ ಹೋ..ಕೋಪ ಇರದಮ್ಮ
ನಮ್ಮ ಅಮ್ಮ ಎಂದು ಎಂದು ಮೇಲು ಕೀಳು ಮಾಡಿಲ್ಲ
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮ
ಈ ಸುಗ್ಗಿ ತಂದವಳಾರಮ್ಮ
F : ನಮ್ಮಮ್ಮ. ನಮ್ಮಮ್ಮ
M : ಈ ಹುಗ್ಗಿ ತಂದವಳಾರಮ್ಮ
F : ಭೂಮಿ ತಾಯಮ್ಮ
M : ಈ ಅಂಬಲಿ ತಂದವಳಾರಮ್ಮ
F : ನಮ್ಮಮ್ಮ. ನಮ್ಮಮ್ಮ
M : ಈ ಓಕುಳಿ ತಂದವಳಾರಮ್ಮ
F : ಭೂಮಿ ತಾಯಮ್ಮ
M : ಓ...ಒಂದು ನೆಲ್ಲು ಚೆಲ್ಲಿದರೆರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ.
Both : ನಮ್ಮಮ್ಮ. ನಮ್ಮಮ್ಮ
ಭೂಮಿ ತಾಯಮ್ಮ...
:ಧನ್ಯವಾದಗಳು: