ಚಂದ್ರಚೂಡ ಶಿವ ಶಂಕರ ಪಾರ್ವತಿ
ರಮಣ ನಿನಗೆ ನಮೋ ನಮೋ
ಚಂದ್ರಚೂಡ ಶಿವ ಶಂಕರ ಪಾರ್ವತಿ
ರಮಣ ನಿನಗೆ ನಮೋ ನಮೋ
ಸುಂದರತರ ಪಿನಾಕ ಧರಹರ
ಸುಂದರತರ ಪಿನಾಕ ಧರಹರ
ಗಂಗಾಧರ ಗಜಚರ್ಮಾಂಬರಧರ
ಗಂಗಾಧರ ಗಜ ಚರ್ಮಾಂಬರಧರ
ಚಂದ್ರಚೂಡ ಶಿವ ಶಂಕರ ಪಾರ್ವತಿ
ರಮಣ ನಿನಗೆ ನಮೋ ನಮೋ
ಕೊರಳಲಿ ಭಸ್ಮ ರುದ್ರಾಕ್ಷವ ಧರಿಸಿದ
ಪರಮ ವೈಷ್ಣವನು ನೀನೆ
ಗರುಡ ಗಮನ ನಮ್ಮ ಪುರಂದರ ವಿಠಲನ
ಪ್ರಾಣಪ್ರಿಯನು ನೀ