* * * *
(M) : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
(F) : ಆ.......ಆ.......ಆ.....
(M) : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಯಾವ ರಾಗ ನುಡಿಸಲೆಂದು ಬಂದೆ ಹೇಳೆ ಪ್ರೇಯಸಿ
ಬಂದೆ ಹೇಳೆ ಪ್ರೇಯಸಿ
(F) : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು
ಬೊಂಬೆ ನನ್ನ ಪ್ರಾಣವು
* * * *
ಚಿತ್ರ : ಒಂದೇ ಕುಲ ಒಂದೇ ದೈವ
ಸಂಗೀತ : ರಾಜನ್ ನಾಗೇಂದ್ರ
ಗಾಯನ : ಪಿಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ
* * * *
(M) : ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
* *
ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ದೇಹ ಎರಡು ಪ್ರಾಣ ಒಂದು ಅನ್ನೋ ಭಾವ ಮೂಡಿದೆ
(F) : ಜಾತಿ ನೀತಿ ಕುಲದಕಟ್ಟು ಪ್ರೇಮಕಿಲ್ಲವೆಂಬುದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
(M) : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಯಾವ ರಾಗ ನುಡಿಸಲೆಂದು ಬಂದೆ ಹೇಳೆ ಪ್ರೇಯಸಿ
ಬಂದೆ ಹೇಳೆ ಪ್ರೇಯಸಿ
(M) : ಆ..........ಆ..........
(F) : ಲಲಲಾ.......ಆ.......
* * * *
Track No. : 340
ಅಪ್ಲೋಡ್ : ಪ್ರಸನ್ ಶರ್ಮ
ಸಹಕಾರ : ಗೌರೀ ಅಗ್ನಿಹೋತ್ರಿ
* * * *
(F) : ಯಾರು ಏನು ಏಕೆ ಎಂಬ ಭಯವು ಇಲ್ಲವಾಯಿತು
(M) : ಭಾಷೆ ಸೋತು ಆಸೆ ಮೊಳೆತು ಮನಸು ಮೇರೆ ದಾಟಿತು
(F) : ನಾಡಿಗೆಲ್ಲ ನಮ್ಮದೊಂದು ರೀತಿ ನೀತಿ ತೋರುವಾ
(M) : ಜೋಡಿಹಕ್ಕಿಯಂತೆ ಕೂಡಿ ಪ್ರೇಮಸುಧೆಯ ಹೀರುವಾ
(Both) : ಜೋಡಿಹಕ್ಕಿಯಂತೆ ಕೂಡಿ ಪ್ರೇಮಸುಧೆಯ ಹೀರುವಾ
(F) : ನೀನೆ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು
ಬೊಂಬೆ ನನ್ನ ಪ್ರಾಣವು
(Both) : ಆ.........ಆ.......ಆ.......
ಆ.........ಲಲಲಾ......
ಆ.......ಲಲಲಾ
* * * * * *
Thank you All