ನೂರು ಜನ್ಮಕೂ, ನೂರಾರು ಜನ್ಮಕೂ
ನೂರು ಜನ್ಮಕೂ, ನೂರಾರು ಜನ್ಮಕೂ
ಒಲವ ಧಾರೆಯೇ, ಒಲಿದೊಲಿದು ಬಾರೆಲೆ
ನನ್ನ ಆತ್ಮ, ನನ್ನ ಪ್ರಾಣ ನೀನೆಂದೂ
ನೂರು ಜನ್ಮಕೂ, ನೂರಾರು ಜನ್ಮಕೂ
ಒಲವ ಧಾರೆಯೇ, ಒಲಿದೊಲಿದು ಬಾರೆಲೆ
ನನ್ನ ಆತ್ಮ, ನನ್ನ ಪ್ರಾಣ ನೀನೆಂದೂ
ನೂರು ಜನ್ಮಕೂ
ಬಾಳೆಂದರೆ, ಪ್ರಣಯಾನುಭಾವ
ಕವಿತೆ, ಆತ್ಮಾನುಸಂಧಾನ
ನೆನಪೆಂದರೆ, ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ, ಓ ಓ ಓ
ನನ್ನೆದೆಯ ಬಾಂದಳದಿ, ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ,ಮತ್ತೆಲ್ಲೂ ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ
ನೂರು ಜನ್ಮಕೂ, ನೂರಾರು ಜನ್ಮಕೂ
ನೂರು ಜನ್ಮಕೂ, ನೂರಾರು ಜನ್ಮಕೂ
ಒಲವ ಧಾರೆಯೇ, ಒಲಿದೊಲಿದು ಬಾರೆಯೆ
ನನ್ನ ಆತ್ಮ, ನನ್ನ ಪ್ರಾಣ ನೀನೆಂದೂ
ನೂರು ಜನ್ಮಕೂ
ಬಾ ಸಂಪಿಗೆ, ಸವಿಬಾವ ಲಹರಿ ಹರಿಯೆ
ಪನ್ನೀರ ಜೀವನದಿ
ಬಾ ಮಲ್ಲಿಗೆ, ಮಮಕಾರ ಮಾಯೆ
ಲೋಕದ ಸುಖವೆಲ್ಲ, ಓ ಓ ಓ
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ, ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ
ನೂರು ಜನ್ಮಕೂ, ನೂರಾರು ಜನ್ಮಕೂ
ನೂರು ಜನ್ಮಕೂ, ನೂರಾರು ಜನ್ಮಕೂ
ಒಲವ ಧಾರೆಯೇ, ಒಲಿದೊಲಿದು ಬಾರೆಲೆ
ನನ್ನ ಆತ್ಮ, ನನ್ನ ಪ್ರಾಣ ನೀನೆಂದೂ
ನೂರು ಜನ್ಮಕೂ,,,,,