F.ಕಾರ್ಯೇಶು ದಾಸಿ ಕರಣೇಶು ಮಂತ್ರಿ
ಭೋಜೇಶು ಮಾತಾ ಶಯನೇಷು ರಂಭಾ
ರೂಪೇಚ ಲಕ್ಷ್ಮಿ ಕ್ಷಮಯಾಧರಿತ್ರಿ
ಷಡ್ಗುಣ ಯುಕ್ತಾಂ ಕುಲ ಧರ್ಮ ಪತ್ನಿ
ಕುಲ ಧರ್ಮ ಪತ್ನಿ
Both....ಆ ಆ ಆ ಆ ಅ ಅ ಆ
M..ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬೆತ್ತಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀ ನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
F..ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟವನೆ
ಇದು ಅರಸಿಬಂದ ಋಣಾನು ಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
ಇದು ಅರಸಿ ಬಂದ ಋಣಾನುಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
M..ಜೀವ ಕೊಟ್ಟಾಗ ದೇವಿಗೆ ಕಣ್ಣು
ಕಾಣದಾದಾಗ ಹುಟ್ಟಿದೆ ನಾನು
ತನ್ನ ತಪ್ಪು ತಾ ತಿದ್ದಿಕೊಳ್ಳಲು
ಅವನು ನಂಗೆ ಕೊಟ್ಟ ಕಾಣಿಕೆ ನೀನು
F..ಸುಮ್ಮಸುಮ್ಮನೆ ನೋಯೋದು ಯಾಕೆ
ಒಂದು ಒಳ್ಳೆ ಮಾತು ಕೇಳುವೆಯೇನು
ಅಂದಚೆಂದವೆಲ್ಲ ಶಾಶ್ವತವಲ್ಲ ಗುಣವಂತ
ನಿನ್ನಾ ಬಲ್ಲೆನು ನಾನು
M..ನಿನ್ನ ಎಲ್ಲ ಮಾತು ಪ್ರೀತಿ ಲಾಲಿ ಹಾಡಮ್ಮ
ಎದೆಯಾಳದ ನೋವಾ ಕಳೆಯೋ ಸೂಜಿಮದ್ದಮ್ಮ
F..ಎಂದೆಂದೂ ನೀನು ನಗುತ್ತಿರುಸಾಕು ರಾಮಯ್ಯ
ಹೆಜ್ಜೆ ಹೆಜ್ಜೆಗೂ ನಾನು ಜೊತೆಯಲಿ ಬರುವೆ ನಂಬಯ್ಯ
M..ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಮಾಳ ಬೆತ್ತಲು ಬಾರಮ್ಮ
.............Ravi Bdvt.................
Corus.F..ಜೋಡಿ ಕೆನ್ನೆಗೆ ಗೌಡ ಗೌಡ್ತಿಗೆ
ಕೆನ್ನೆ ಮೇಲೆ ಎಂಥ ಗಾಯವಾಗಿದೆ
ಏನ ಮಾಡಿದೆ ಮುದ್ದು ಗಿಣಿಯೆ
ಯಾವಾ ಗಿಣಿಯೆ ಕೆನ್ನೆ ಕಚ್ಚಿದೆ
Corus.M ಮೇಲಕ್ಕೆತ್ತಿರೆ ನಮ್ಮ ಹುಡುಗನ್ನ
ಶೃಂಗಾರ ಧೀರ ಜೋರು ಕುಮಾರ
ನೋಡಿರಿ ಅಲ್ಲಿ ಕೆನ್ನೆಯ ಮೇಲೆ
ರಾಸಲೀಲೆಯ ಆಟದ ಜೋರಾ
F..ಮೂಡಿದರೆನೆ ಹೂವಿನ ಜನ್ಮ ಪಾವನ
ನದಿ ಸಾಗರ ಸೇರುವ ಗುರಿಯ ಹಾಗೆ ಜೀವನ
M.ಪ್ರೀತಿ ಬಂಧನ ಗಂಡು ಹೆಣ್ಣಿಗೆ ಭೂಷಣ
ಈ ಪ್ರೀತಿ ಎಂಬುದೇ ಲೋಕ ಹುಟ್ಟಲು ಕಾರಣ
F.ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟನೆ ನೀನಯ್ಯಾ
F..ಕಣ್ಣು ಮುಚ್ಚಲು ಕನಸಿನ ಮನೆ
ಕನಸಿನ ತುಂಬ ಬಣ್ಣದ ಜೋಲಿ
ನಿನ್ನ ಹೋಲುವ ಗಂಡುಮಗುವ
ಕಾಣುವ ಆಸೆ ನನ್ನ ಕಣ್ಣಲ್ಲಿ
M..ಎಂದೆಂದೂ ತಾಯಿ ಹಾಗವ೦ತೊಳೆ
ದಯಾಮಯಿ ಜಗಜ್ಜನನಿ ನಿನ್ನನ್ನೇ ಹೋಲೋ
ತಾಯಿ ಗುಣದ ಹೆಣ್ಣು ಮಗುವ ತಾಯಿಯಾಗು ನೀ
F..ಹಾಗೇ ಆಗಲಿ ಹೆಣ್ಣೇ ಆಗಲಿ ರಾಮಯ್ಯ
ಹೆಣ್ಣ ಜೊತೆಗೂ ಒಂದು ಗಂಡು ಆಗಲಿ ಅನ್ನಯ್ಯ
ಮೇಲಿರೋ ದೇವ್ರು ಕಣ್ಣುಬಿಟ್ಟರೆ ಸೀತಮ್ಮ
ಎರೆಡೆರೆಡು ಕೈಲೀ ಜೋಡಿ ತೊಟ್ಟಿಲು ತುೂಗಮ್ಮ
M..ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬೆತ್ತಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀ ನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀ ನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ