menu-iconlogo
huatong
huatong
Lyrics
Recordings
ಹಾಡು: ನಿತ್ಯೋತ್ಸವ

ರಚನೆ: ಕೆ. ಎಸ್. ನಿಸ್ಸಾರ್ ಅಹಮದ್

ಜೋಗದ ಸಿರಿ ಬೆಳಕಿನಲ್ಲಿ

ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ

ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ

ತೇಗ ಗಂಧ ತರುಗಳಲ್ಲಿ

ಕೋರಸ್ ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ

ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ

ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ

ತೇಗ ಗಂಧ ತರುಗಳಲ್ಲಿ

ಕೋರಸ್ ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ

ಸಿಂಹಾಸನ ಮಾಲೆಯಲ್ಲಿ,

ಗತ ಸಾಹಸ ಸಾರುತಿರುವ

ಶಾಸನಗಳ ಸಾಲಿನಲ್ಲಿ,

ಇತಿಹಾಸದ ಹಿಮದಲ್ಲಿನ

ಸಿಂಹಾಸನ ಮಾಲೆಯಲ್ಲಿ,

ಗತ ಸಾಹಸ ಸಾರುತಿರುವ

ಶಾಸನಗಳ ಸಾಲಿನಲ್ಲಿ,

ಓಲೆ ಗರಿಯ ಸಿರಿಗಳಲ್ಲಿ,

ದೇಗುಲಗಳ ಭಿತ್ತಿಗಳಲಿ

ಕೋರಸ್ ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ,

ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ

ಲೋಕಾವೃತ ಸೀಮೆಯೆ,

ಹಲವೆನ್ನದ ಹಿರಿಮೆಯೆ,

ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ

ಲೋಕಾವೃತ ಸೀಮೆಯೆ,

ಈ ಮತ್ಸರ ನಿರ್ಮತ್ಸರ

ಮನದುದಾರ ಮಹಿಮೆಯೆ

ಕೋರಸ್ ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ

ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ

ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ

ತೇಗ ಗಂಧ ತರುಗಳಲ್ಲಿ

ಕೋರಸ್ ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

ನಿನಗೆ…ನಿತ್ಯೋತ್ಸವ,

ತಾಯಿ,ನಿತ್ಯೋತ್ಸವ

More From Ravi Moorur/Vinay Kumar/Supriya Acharya/Mangala Ravi

See alllogo