M. ಏ ಹುಡುಗಿ ಯಾಕ್ ಹಿಂಗ್ ಆಡ್ತಿ
ಈ ಮಾತಲ್ಲೆ ಮಳ್ಳ ಮಾಡ್ತಿ
ವರ್ಷ ಆತು ಹಿಂಗ ಆಡ್ತಿ
ನೀ ಸಿಗವಲ್ಲಿ ಕೈಗೆ
F. ಏ ಹುಡುಗ ಯಾಕೊ ಕಾಡ್ತಿ
ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
ದಿನಕೊಂದು ಡೈಲಾಗ್ ಹೊಡಿತಿ
ಹೆಂಗೈತೆ ಮೈಗೆ
M. ನಿನ್ನ ನಡುವು ಸಣ್ಣೈತಿ
ನಡಿಗೆ ಕಣ್ಣು ಕುಕ್ಕೈತಿ
ನಿನ್ನ ಗುಂಗ ಏರೈತಿ
ಮನ್ಸು ಮಂಗ್ಯ ಆಗೈತಿ
ನನ್ನ ತಲಿಯ ಕೆಡಿಸೇತಿ
ಹೆ ಹುಡ್ಗಿ
F. ಏನ ಮಾವ
M. ಚುಟು ಚುಟು
F. ಎಲ್ಲಿ
M. ಚುಟು ಚುಟು ಅಂತೈತಿ ನನಗ
ಚುಮು ಚುಮು ಅಗ್ತೈತಿ......
ಚುಟು ಚುಟು ಅಂತೈತಿ ನನಗ
ಚುಮು ಚುಮು ಅಗ್ತೈತಿ
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಶಿವು ಬೆರಗಿ
F. ರಾತ್ರಿ ಜಾಗರಣೆಯಾಗ
ಸಂತೆ ಬಜರಾದಾಗ
ಸಾಲ ಕೊಟ್ಟೋನಂಗ ಕಾಡ್ತಿ ಹ
ಕಣ್ಣಲ್ಲೆ ಮಿಸ್ಕಾಲು ಕೊಡ್ತಿ
M. ಊರ್ ತುಂಬ ಹುಡ್ಗರಿದ್ರು
ನಿನ ಮ್ಯಾಲ ನನ್ನ ನೆದರು
ಮನಸಿದ್ರು ಇಲ್ದಂಗ ನುಲೀತೀ
ಇದನ್ಯಾವ ಸಾಲ್ಯಾಗ ಕಲತೀ
F. ಮನಸಲಿ ಹುಡುಗ ಮಸಾಲೇ ಅರಿತಿ
ಸಿಕ್ಕಲಿ ಸೀಜ಼ಾ ಮಾಡಕ ಬರುತೀ
M. ನಿನ್ನ ನೋಟಕ ಮೈ ಮಾಟಕ
ಬ್ಯಾಲೆ.ನ್ಸ್ ತಪ್ಪೈತೀ
M. ಎ..ಹುಡುಗಿ
F. ಏನ ಮಾವ
M. ಚುಟು ಚುಟು ಅಂತೈತಿ ನನಗ
ಚುಮು ಚುಮು ಅಗ್ತೈತಿ......
ಚುಟು ಚುಟು ಅಂತೈತಿ ನನಗ
ಚುಮು ಚುಮು ಅಗ್ತೈತಿ
ಅಪ್ಲೋಡ್: ೨೧/೦೯/೨೩
? ಚಂದನ್_ಕೆಎ
M. ಊರ್ ಹಿಂದೆ ಬಾಳೆ ತೋಟ
ಊರ್ ಮುಂದೆ ಖಾಲಿ ಸೈಟ
ಇದಕೆಲ್ಲ ನಿನಾಗ ಒಡತಿ
ಮತ್ಯಾಕ ಅನುಮಾನ ಪಡತಿ
F. ಹ್ ಶೋಕಿಗೆ ಸಾಲ ಮಾಡಿ
ತಂದೀದಿ ಬುಲ್ಲೆಟ್ ಗಾಡಿ
ನನ್ನೋಡಿ ಡಬ್ಬಲ್ ಹಾರನ್ ಹೊಡಿತಿ
ಊರಾಗ ನೀನೆಷ್ಟ್ ಮೆರಿತಿ
M. ಊರಾಗ ನಂದೊಂದ್ ಲೆವೆಲ್ಲಾ ಐತಿ
ದಾರ್ಯಾಗ್ ನಿಂತು ಯಾಕ ಬೈತಿ
F. ಇಷ್ಟ್ ಕಾಡತಿ
ಮಳ್ಳ ಮಾಡತಿ
ಮನಸ್ಯಾಂಗ ತಡಿತೈತಿ.........
ಮಾವ
M. ಏನ ಹುಡ್ಗಿ
F. ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ
ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ
ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ