ಮೊಡದ ಮೆರೆಯಲಿ ಕುಟುಂಬ
ರೂಪ ಮಂಜು
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಬಿಗಿ ಹಿಡಿದ ಬೆರಳ ಸಡಿಲಿಸ ಬೇಡ
ಕಲೆತಿರೋ ಈ ಕಣ್ಣಾ ಕದಲಿಸಬೇಡ
ಅರೆಗಳಿಗೆಯೂ ನನ್ನ ತೊರೆದಿರಬೇಡ
ತೊರೆದಿರುವ ಕ್ಷಣವ ನೆನೆವುದು ಬೇಡ
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ನಿನ್ನ ಅಂಗೈ ಮೇಲೆ ಮುಖವಿರಿಸಿ
ನಿನ್ನೆ ಹೀಗೆ ನೋಡುವಾಸೆ
ಎಲ್ಲ ಜನುಮ ನಿನ್ನೆ ಅನುಸರಿಸಿ
ನಿನ್ನ ಉಸಿರಾ ಸೇರುವಾಸೆ
ಗಂಟಲು ಬಿಗಿದಿದೆ ಮಾತು ಬಾರದೆ
ಕಂಗಳು ತುಂಬಿವೆ ಸಂತೋಷಕೆ
ಕೊರಳ ಮೇಲಿದೆ ನಿನ್ನಯ ಉಡುಗೊರೆ
ಇದಕೂ ಮೀರಿದ ಬದುಕೇತಕೆ
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಗೊತ್ತೇ ಇರದ ಅವನ ಜಗದೊಳಗೆ
ಮೊದಲ ಹೆಜ್ಜೆ ಇಡುವಂತಿದೆ
ಅವನ ಹೆಸರ ಕೂಗಿ ಕರೆದಾಗ
ನನ್ನೇ ಯಾರೋ ಕರೆದಂತಿದೆ
ನಾಚಿಕೆ ಕಣ್ಣಲಿ ಹೇಗೆ ನೋಡಲಿ
ಬೆರಳು ಬಿಡಿಸಿದೆ ರಂಗೋಲಿಯ
ಒಲವ ದಿಬ್ಬಣ ಏರಿ ಹೊರಟೆನಾ
ತೀರ ಹೊಸದೀ ರೋಮಾಂಚನ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಆಸೆಗಳ ಚುಕ್ಕಿ ಇಟ್ಟೇನು ಕನಸಲಿ
ಮೂಡಿಸು ಚಿತ್ರವ ನನ್ನಯ ಬದುಕಲಿ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
?Thank You JK?